ಭಾನುವಾರ, ಮಾರ್ಚ್ 24, 2013

ಟ್ವಿಟ್ಟರ್ ಗೆ ಅನುವಾದಕರು ಬೇಕಾಗಿದ್ದಾರೆ.

ಗೆಳೆಯರೆ, ಟ್ವಿಟ್ಟರ್ ಗೆ  ಅನುವಾದಕರು ಬೇಕಾಗಿದ್ದಾರೆ.
ಹೌದು.. ಟ್ವಿಟ್ಟರ್ ಅನ್ನು ನೀವು ಈಗ ಕನ್ನಡದಲ್ಲೂ ಬಳಸಬಹುದು. ಆದರೆ ಈಗ ನಿಮ್ಮ ಸಹಕಾರವೂ ಬೇಕಾಗಿದೆ.
ನೀವು ಅನುವಾದಕರಾಗಿ ಕೆಲಸ ಮಾಡಬೇಕಾಗಿದೆ, ಕನ್ನಡಕ್ಕಾಗಿ.


ಟ್ವಿಟ್ಟರ್ ಈಗ ಭಾರತ್ರೀಯ ಭಾಷೆಗಳಲ್ಲಿ ಕೇವಲ ಕನ್ನಡ, ತಮಿಳು, ಬೆಂಗಾಲಿ, ಉರ್ದು ಮತ್ತು ಹಿಂದಿಯಲ್ಲಿ ಮಾತ್ರ ಅನುವಾದಕ್ಕೆ ಲಭ್ಯವಿದೆ, ಮತ್ತು  ಈಗ ಉರ್ದು ಮತ್ತು ಹಿಂದಿಯಲ್ಲಿ ನೀವು ಉಪಯೋಗಿಸಲೂಬಹುದು.

ಅದೆಷ್ಟೋ ಮಂದಿ ಕನ್ನಡಿಗರು ಅನುವಾದಿಸುತ್ತಿದ್ದರೂ ಅದು ಸಾಕಾಗುತ್ತಿಲ್ಲ. ಅದೆಷ್ಟೊ ಮಂದಿ ಅನ್ಯರು ಬಂದು ಇನ್ನೇನೋ ಸೇರಿಸುತ್ತಿದ್ದಾರೆ. ದಯಮಾಡಿ ಬನ್ನಿ ಕನ್ನಡದಲ್ಲಿ ಫೇಸ್ ಬುಕ್ ತಂದಂತೆ, ಟ್ವಿಟ್ಟರ್ ಅನ್ನೂ ಕನ್ನಡದಲ್ಲಿ ತರೋಣ.

ಟ್ವಿಟ್ಟರ್ ನಲ್ಲಿನ ಕನ್ನಡದ ಫೋರಂ ಖಾಲಿ ಮನೆಯಂತಾಗಿದೆ. ಕೆಳಗಿನ ಚಿತ್ರ ಟ್ವಿಟ್ಟರ್ ನಲ್ಲಿನ ಕನ್ನಡದ ಫೋರಂ.
ಅನುವಾದಿಸಲು ಈ ಲಿಂಕಿಗೆ ಹೋಗಿ  http://translate.twitter.com ಮತ್ತು ನಿಮ್ಮ ಟ್ವಿಟ್ಟರ್ ಅಕೌಂಟಿನ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಉಪಯೋಗಿಸಿ ಲಾಗಿನ್ ಆಗಿ.

ಚಿತ್ರ ಕೃಪೆ:http://hackuadi.blogspot.com

ಶುಕ್ರವಾರ, ಜುಲೈ 13, 2012

ಕನ್ನಡದಲ್ಲಿ ಟೈಪಿಸಲು ನಿಮಗೆ ಗೊತ್ತಿಲ್ಲವೆ? ಅಥವಾ ಕನ್ನಡದಲ್ಲಿ ಟೈಪಿಸಲು ನಿಮಗೆ ಕಷ್ಟವಾಗುತ್ತಿದೆಯೆ?

ಕನ್ನಡದಲ್ಲಿ ಟೈಪಿಸಲು ನಿಮಗೆ ಗೊತ್ತಿಲ್ಲವೆ? ಅಥವಾ ಕನ್ನಡದಲ್ಲಿ ಟೈಪಿಸಲು ನಿಮಗೆ ಕಷ್ಟವಾಗುತ್ತಿದೆಯೆ?  
ಗೆಳೆಯರ ಸಹಾಯದಿಂದ ಮತ್ತು ಒಂದಷ್ಟು ಫೇಸ್ಬುಕ್ ಗೆಳೆಯರು ಮತ್ತು ಗುಂಪುಗಳಿಂದ ಒಂದಷ್ಟು ವೆಬ್ಸೈಟ್ ಗಳನ್ನು ಕಲೆ ಹಾಕಿದ್ದೇವೆ. ನಿಮಗೆ ಉಪಯೋಗವಾಗಬಹುದು


೧)ವೆಬ್ ದುನಿಯಾದವರ ಪುಟ
ಇಲ್ಲಿ ನೀವು ನೇರವಾಗಿ ಕನ್ನಡವನ್ನು ಟೈಪಿಸಬಹುದು.

೨)ಖ್ವಿಲ್ ಪ್ಯಾಡ್
ಇಲ್ಲಿ ಆಂಗ್ಲ ಅಕ್ಷರಗಳನ್ನು ಟೈಪಿಸಿ ನಂತರ ಸ್ಪೇಸ್ ಬಾರ್ ಒತ್ತಿ. ಕನ್ನಡ ಅಕ್ಷರಗಳು ಮೂಡುವುದು

೩)ಗೂಗಲ್ ಟ್ರಾನ್ಸ್ ಲಿಟರೇಟ್
ಇದು ಗೂಗಲ್ ನವರ ಸೇವೆ. ಇಲ್ಲಿ ಆಂಗ್ಲ ಅಕ್ಷರಗಳನ್ನು ಟೈಪಿಸಿ ನಂತರ ಸ್ಪೇಸ್ ಬಾರ್ ಒತ್ತಿ. ಕನ್ನಡ ಅಕ್ಷರಗಳು ಮೂಡುವುದು. Ctrl+G ಒತ್ತುವ ಮೂಲಕ ಆಂಗ್ಲ ಮತ್ತು ಕನ್ನಡಕ್ಕೆ ಬದಲಾಗಬಹುದು.

೪)ಮೋನುಸಾಫ್ಟ್
ಇಲ್ಲೂ ಕೂಡ ನೇರವಾಗಿ ಕನ್ನಡದಲ್ಲಿ ಟೈಪಿಸಬಹುದು. ನಿಮ್ಮ ಉಪಯೋಗಕ್ಕಾಗಿ ಇದರಲ್ಲಿಯೇ ನಿಮಗೆ ಯಾವ ಅಕ್ಷರಕ್ಕಾಗಿ ಏನನ್ನು ಟಪಿಸಬೇಕೆಂಬ ಮಾಹಿತಿಯೂ ಇದೆ.

೫)ಬರ್ ನ್ಹಾ
ಇಲ್ಲಿ ನೀವು ನೇರವಾಗಿ ಕನ್ನಡ ಟೈಪಿಸಬಹುದಾದರೂ ಇದು ಬೇರೆ ತರಹದ ಕೀಬೋರ್ಡ್ ಅನ್ನು ಹೊಂದಿದೆ.

೬)ಬರಹ
ಈ ವೆಬ್ಸೈಟಿನಿಂದ ಬರಹ ತಂತ್ರಾಂಶ (ಸಾಫ್ಟ್ ವೇರ್) ವನ್ನು ನಿಮ್ಮ ಗಣಕಕ್ಕೆ ಇಳಿಸಿ ಇನ್ಸ್ಟಾಲ್ ಮಾಡಿ ನಂತರ ಉಪಯೋಗಿಸಬಹುದು

೭)ನುಡಿ
ಈ ವೆಬ್ಸೈಟಿನಿಂದ ನುಡಿ ತಂತ್ರಾಂಶ (ಸಾಫ್ಟ್ ವೇರ್) ವನ್ನು ನಿಮ್ಮ ಗಣಕಕ್ಕೆ ಇಳಿಸಿ ಇನ್ಸ್ಟಾಲ್ ಮಾಡಿ ನಂತರ ಉಪಯೋಗಿಸಬಹುದು

ಮಂಗಳವಾರ, ಜುಲೈ 3, 2012

ಕನ್ನಡದ ಬ್ರೌಸರ್


ಆಂಗ್ಲ ಭಾಷೆಯ ಬ್ರೌಸರ್ ಉಪಯೋಗಿಸಿ ಬೇಜಾರಾಗಿದೆಯೆ? ಹಾಗಾದರೆ ಇಲ್ಲಿದೆ ಕನ್ನಡದ ಬ್ರೌಸರ್.

ಹೌದು..  ಈಗ ಗೂಗಲ್ ಮತ್ತು ಮೊಝಿಲಾ ಕನ್ನಡದಲ್ಲಿ ತಮ್ಮ ಬ್ರೌಸರ್ ಗಳನ್ನು ಬಿಡುಗಡೆ ಮಾಡುತ್ತಿವೆ.

ಗೂಗಲ್ ಕ್ರೋಮ್ ಕನ್ನಡಕ್ಕಾಗಿ ಈ ಕೆಳಗಿನ ಕೊಂಡಿಗೆ ಭೇಟಿ ನೀಡಿ

https://www.google.com/chrome?platform=win&hl=kn (ವಿಂಡೋಸ್)
https://www.google.com/chrome?platform=mac&hl=kn (ಮ್ಯಾಕ್)
https://www.google.com/chrome?platform=linux&hl=kn (ಲೈನಕ್ಸ್)

ಮೊಝಿಲಾ ಪೈರ್ ಫಾಕ್ಸ್ ಕನ್ನಡಕ್ಕಾಗಿ 

http://download.mozilla.org/?product=firefox-13.0.1&os=win&lang=kn (ವಿಂಡೋಸ್)
http://download.mozilla.org/?product=firefox-13.0.1&os=osx&lang=kn (ಮ್ಯಾಕ್)
http://download.mozilla.org/?product=firefox-13.0.1&os=linux&lang=kn (ಲೈನಕ್ಸ್)

ಇದಕ್ಕಾಗಿ ಕೆಲಸ ಮಾಡಿದ ಕನ್ನಡಿಗರಿಗೆ ವಂದನೆಗಳು.
ಚಿತ್ರಗಳು:ಗೂಗಲ್ ಇಮೇಜಸ್

ಸೋಮವಾರ, ಜೂನ್ 18, 2012

ಉಚಿತವಾಗಿ .com, .org, .net ಡೊಮೈನ್ ಬೇಕೆ?


ಈಗ ಒಂದು ವರ್ಷದವರೆಗೆ ನೀವು .com, .net, .org ಡೊಮೈನ್ ಅನ್ನು ಉಚಿತವಾಗಿ ಪಡೆಯಬಹುದು ಮತ್ತು ಉಚಿತವಾಗಿ ಹಾಸ್ಟ್ ಮಾಡಬಹುದು

=>ಮೊದಲಿಗೆ ನೀವು ಈ ಕೆಳಗಿನ ವೆಬ್ಸೈಟಿಗೆ ಹೋಗಿ ರಿಜಿಸ್ಟರ್ ಮಾಡಿಕೊಳ್ಳಿ.
        http://www.gybo.com/wisconsin/getonline
     ನಂತರ ಅಲ್ಲಿಂದಲೇ
        https://www.intuit.com/login/?content=iwsContent ನಲ್ಲಿ ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಿ

=> ಈಗ ನಿಮಗೆ ಬೇಕಾದ ಡೊಮೈನ್ ಹೆಸರನ್ನು ಆಯ್ದುಕೊಳ್ಳಿ


=> ನಿಮ್ಮ  ಡೊಮೈನ್ ಆಯ್ದುಕೊಂಡ ನಂತರ ನಿಮ್ಮ ಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ.


=> ಈಗ Domain Privacy ಮುಂದೆ ಇರುವ ಆಯ್ಕೆಯನ್ನು ಅಳಿಸಿ, ನಂತರ submit ಬಟನ್ ಒತ್ತಿ


=> ನಂತರ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ. ಚಿಂತೆ ಬೇಡ, ಇದು ಕೇವಲ ನಕಲಿ ಮಾಹಿತಿ ನೀಡುವವರನ್ನು ತಡೆಯಲು ಮಾತ್ರ.


=> ನಿಮಗೆ ಬೇಕಾದ ಡೊಮೈನ್ ಪಡೆದ ನಂತರ ನಿಮಗೆ ಬೇಕಾದ ವೆಬ್ಸೈಟ್ ಡಿಸೈನ್ ಅನ್ನು ಆಯ್ದುಕೊಳ್ಳಿ.

=> ಈಗ ನಿಮಗೆ ಬೇಕಾದಂತೆ ನಿಮ್ಮ ವೆಬ್ಸೈಟ್ ಅನ್ನು ಸಂಪಾದಿಸಿ. ಕೊನೆಗೆ Publish ಬಟನ್ ಒತ್ತಿಶುಕ್ರವಾರ, ಏಪ್ರಿಲ್ 27, 2012

ವೇಗವಾಗಿ ಟೊರೆಂಟ್ ಕಡತವನ್ನು ಡೌನ್ಲೋಡ್ ಮಾಡಿಕೊಳ್ಳಲು

            ನಿಮಗೆ ಟೊರೆಂಟ್ ಕಡತಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ತೊಂದರೆಯಾಗುತ್ತಿರಬೇಕು ಅಥವಾ ತುಂಬಾ ನಿಧಾನವಿರಬಹುದು. ಈಗ ಈ ನಿಧಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಇಲ್ಲೊಂದು ಚಿಕ್ಕ ಉಪಾಯವಿದೆ.

ಈ ಕೆಳಗಿನವುಗಳನ್ನು ಅಲ್ಲಿರುವಂತೆಯೇ ಪಾಲಿಸಿ
೧.ಮೊದಲು ನಿಮಗೆ ಬೇಕಾದ ಟೊರೆಂಟ್ ಅನ್ನು ನಿಮ್ಮ ಗಣಕಕ್ಕೆ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಅದರ ವೆಬ್ ಅಡ್ರೆಸ್ ಅನ್ನು ಕಾಪಿ ಮಾಡಿಕೊಳ್ಳಿ.
೨.ನಂತರ www.bitlet.org ವೆಬ್ಸೈಟಿಗೆ ಭೇಟಿ ನೀಡಿ.
೩. ಅಲ್ಲಿ ನಿಮ್ಮ ಗಣಕದಲ್ಲಿರುವ ಟೊರೆಂಟ್ ಅನ್ನು ಡೌನ್ಲೋಡ್ ಮಾಡಲು "Select Local Torrent" ಬಟನ್ ಒತ್ತಿ ಅಥವಾ ನಿಮ್ಮ ಬಳಿ ಆ ಟೊರೆಂಟಿನ ವೆಬ್ ಅಡ್ರೆಸ್ ಇದ್ದಲ್ಲಿ ಕೆಳಗೆ ನೀಡಿರುವ ಚಿತ್ರದಲ್ಲಿರುವಂತೆ ಅಲ್ಲಿರುವ ಬಾಕ್ಸಿನಲ್ಲಿ ಅಂಟಿಸಿ ಮತ್ತು "Download Torrent" ಬಟನ್ ಮೇಲೆ ಒತ್ತಿ.


೪. ಈಗ ನಿಮ್ಮ ಟೊರೆಂಟ್ ಆ bitlet ವೆಬ್ ಸರ್ವರ್ ಅಲ್ಲಿ ಡೌನ್ಲೋಡ್ ಆಗುತ್ತದೆ. ಡೌನ್ಲೋಡ್ ಆದ ನಂತರ ನಿಮಗೆ ಆ ವೆಬ್ಸೈಟ್ ಡೌನ್ಲೋಡ್ ಆದ ಕಡತವನ್ನು ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲು Direct Link ಒಂದನ್ನು ನೀಡುತ್ತದೆ.
೫.ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆ ಕಡತವನ್ನು ನೇರವಾಗಿ ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಬಹುದು.
೬.ಈ ವೆಬ್ಸೈಟಿನಲ್ಲಿ ನಿಮ್ಮ ಟೊರೆಂಟ್ ನೀವು ಅಂದುಕೊಳ್ಳುವುದಕ್ಕಿಂತಲೂ ವೇಗವಾಗಿ ಡೌನ್ಲೋಡ್ ಆಗುತ್ತದೆ.
೭. ನಿಮ್ಮ ಅಮೂಲ್ಯ ಸಮಯವನ್ನು ಇದರಿಂದ ಉಳಿಸಿಕೊಳ್ಳಬಹುದು.
೮.ನಿಮ್ಮ ಗಣಕಕ್ಕೆ ಆ ಕಡತವನ್ನು ಇಳಿಸಿಕೊಳ್ಳುವ ಮೊದಲು Internet Download Manager ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ. ಇದರಿಂದ ಡೌನ್ಲೋಡ್ ವೇಗವನ್ನು ಹೆಚ್ಚಿಸಬಹುದು. ಅದಕ್ಕಾಗಿ ಕೆಳಗಿನ ಲಿಂಕಿಗೆ ಭೇಟಿ ನೀಡಿ.
Click here for Internet Download Manager

ಚಿತ್ರ ಕೃಪೆ:http://hackuadi.blogspot.com