ಶನಿವಾರ, ಜನವರಿ 22, 2011

ನಿಮ್ಮ ಕಂಪ್ಯೂಟರ್ ಶುರು ಮಾಡುವಾಗ ತೊಂದರೆ ನೀಡುತ್ತಿದೆಯೆ????????????????????

                            ನಿಮ್ಮ ಕಂಪ್ಯೂಟರ್ ಆನ್ ಮಾಡಿದಾಗ ಏನಾದರು ತೊಂದರೆಗಳಿವೆಯೆ? ಅಥವಾ ನೀವು ನಿಮ್ಮ ಕಂಪ್ಯೂಟರ್ ಆನ್ ಮಾಡಿದಾಗ ಬರುವ ವಿಂಡೋಸ್ ಲೋಗೊ ಹಿಂದೆ ಏನು ನಡೆಯುತ್ತಿದೆ ಎಂದು ತಿಳಿಯಬೇಕೆ? ಹಾಗಾದರೆ ಇಲ್ಲಿದೆ ಉಪಾಯ.

ಈ ಕೆಳಗಿನ ವಿಧಾನಗಳನ್ನು ಅನುಸರಿಸಿ
1. "System Properties" ಡೈಲಾಗ್ ಬಾಕ್ಸ್ ಅನ್ನು ತೆರೆಯಿರಿ (START>SETTINGS>CONTROL         PANEL>SYSTEM)2.ಅಲ್ಲಿ "Advanced" tab ಮೇಲೆ ಕ್ಲಿಕ್ ಮಾಡಿರಿ, ಮತ್ತು "Startup And Recovery" ಭಾಗದಲ್ಲಿರುವ "ಸೆಟ್ಟಿಂಗ್ಸ್" ಬಟನ್ ಮೇಲೆ ಕ್ಲಿಕ್ ಮಾಡಿರಿ.3.ಈಗ "Startup And Recovery" ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಅಲ್ಲಿ "System Startup" ಎಂಬುದರ ಮುಂದಿರುವ "Edit" ಬಟನ್ ಮೇಲೆ ಕ್ಲಿಕ್ಕಿಸಿ.


4.ಅದನ್ನು ಕ್ಲಿಕ್ಕಿಸಿದಾಗ "Boot.ini "ಎಂಬ ಕಡತವೊಂದು ನೋಟ್ ಪ್ಯಾಡ್ ನಲ್ಲಿ ತೆರೆದುಕೊಳ್ಳುತ್ತದೆ. ಅದರಲ್ಲಿ "/fastdetect" ಎಂದಿರುವ ಲೈನಿನ ಕೊನೆಯ ಭಾಗಕ್ಕೆ ಹೋಗಿ ಮತ್ತು ಅಲ್ಲಿ ಸ್ಪೇಸ್ ಬಾರ್ ಅನ್ನು ಒಮ್ಮೆ ಒತ್ತಿ ಮತ್ತು    /SOS    ಎಂದು ಸೇರಿಸಿ.
5.  ಈಗ Boot.ini ಉಳಿಸಿ(ಸೇವ್ ಮಾಡಿ).
6.ಈಗ "Startup And Recovery" ಮತ್ತು "System Properties" ನಲ್ಲಿ ಇರುವ OK ಬಟನ್ ಮೇಲೆ ಕ್ಲಿಕ್ ಮಾಡಿ.
7.ಈಗ ಇದರ ಫಲಿತಾಂಶವನ್ನು ನೋಡಲು ನಿಮ್ಮ ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿರಿ.

                 ಒಮ್ಮೆ ನಿಮ್ಮ ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಾದ ಮೇಲೆ ಲೋಡಿಂಗ್ ಸ್ಕ್ರೀನ್ ಬದಲು ಸಿಸ್ಟಮ್ ಆಪರೇಷನ್ ಗಳನ್ನು ನೀವು ನೋಡಬಹುದು.
ಮತ್ತೆ ಆ ಲೋಡ್ ಸ್ಕ್ರೀನ್ ಗಾಗಿ ಮೇಲಿನ ವಿಧಾನವನ್ನೇ ಪಾಲಿಸಿ "/SOS" ಅನ್ನು ತೆಗೆದು ಹಾಕಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ