ಬುಧವಾರ, ನವೆಂಬರ್ 23, 2011

140 ಕ್ಕಿಂತ ಹೆಚ್ಚು ಅಕ್ಷರಗಳನ್ನು ಪೋಸ್ಟ್ ಮಾಡಲು ಟ್ವಿಟ್ಟರ್ ಅನ್ನು ಹ್ಯಾಕ್ ಮಾಡಿದ್ದು ಹೇಗೆ?

ನಿಮಗೆಲ್ಲಾ ಗೊತ್ತಿರುವ ಹಾಗೆ ಟ್ವಿಟ್ಟರ್ ನಲ್ಲಿ ನಾವು ಕೇವಲ140 ಅಕ್ಷರಗಳನ್ನು ಮಾತ್ರ ಪೋಸ್ಟ್ ಮಾಡಬಹುದು. 140 ಕ್ಕಿಂತ ಹೆಚ್ಚು ಅಕ್ಷರಗಳನ್ನು ಪೋಸ್ಟ್ ಮಾಡಲಾಗುವುದಿಲ್ಲ. ಆದರೆ ನೆನ್ನೆ ಟ್ವಟ್ಟರ್ ನಲ್ಲಿ ಹಲವು ಜನ 140ಕ್ಕಿಂತ ಹೆಚ್ಚು ಅಕ್ಷರಗಳ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದರು.ನೆನ್ನೆ ಹಲವು ಬ್ಲಾಗ್ ಗಳಲ್ಲಿ ಈ ವಿಷಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಕೆಲವು ಕಾಮೆಂಟ್ ಗಳನ್ನು ಮತ್ತು ಇನ್ನೂ ಕೆಲವು ಬ್ಲಾಗ್ ಪೋಸ್ಟ್ ಮತ್ತು ಹಲವು ಜನರ ಅಭಿಪ್ರಾಯಗಳನ್ನು ಕೇಳಿದ ನಂತರ ಇದರ ಮೂಲ ಕಾರಣ ತಿಳಿದು ಬಂದಿತು.

ಆ ಟ್ವೀಟ್ ನಲ್ಲಿ ಒಂದೇ ಸಮನೆ "\355\220\265\345\233\260\355\250\265\" ಅಥವಾ ಇದೇ ತರಹದ ಮುಂದೆ ಬ್ಯಾಕ್ ಸ್ಲಾಷ್ ಹೊಂದಿದ ಅಂಕಿಗಳಿದ್ದವು. ಇಲ್ಲಿ ಮುಂದೆ ಬ್ಯಾಕ್ ಸ್ಲಾಷ್ ಹೊಂದಿದ ಅಂಕಿಗಳನ್ನು ನಾವು ಬದಲಾಯಿಸಲಾಗದ ಅಂಕಿಗಳೆಂದು ಕರೆಯುತ್ತೇವೆ(Valid Character Constant). ಈ ನಾಲ್ಕು ಅಂಕಿಗಳನ್ನು(/355) ಟ್ವಿಟ್ಟರ್ ಕೇವಲ ಒಂದು ಅಂಕಿಯೆಂದು ಪರಿಗಣಿಸುತ್ತದೆ.


ಈ ತಂತ್ರವನ್ನು ಉಪಯೋಗಿಸಿ ಆತ ಟ್ವಿಟ್ಟರ್ ಅಲ್ಗೋರಿತ್ತಮ್ ಅನ್ನು ಯಾಮಾರಿಸಿ ಅಷ್ಟುದ್ದದ ಪೋಸ್ಟ್ ಒಂದನ್ನು ಹಾಕಿದ್ದಾನೆ. ಇದಕ್ಕೆ ಇನ್ನೂ ಹಲವಾರು ವಿವರಣೆಗಳಿದ್ದರೂ ಇದೇ ಸರಿಯಾದ ವಿವರಣೆ ಎಂಬುದು ನನ್ನ ಸಂಶೋಧನೆಯಿಂದ ತಿಳಿದುಬಂದ ವಿಚಾರ.


ಸಹಾಯ: ಸಚಿನ್, ನವನೀತ್