ಶನಿವಾರ, ಡಿಸೆಂಬರ್ 3, 2011

ಯೂಟ್ಯೂಬಿನ ಏಳು ತಂತ್ರಗಳುಯೂಟ್ಯೂಬ್-- ಒಂದು ಪ್ರಖ್ಯಾತ ವಿಡಿಯೊ ಹುಡುಕುವ ವೆಬ್ಸೈಟ್. ಇಲ್ಲಿ ಕೇವಲ ವಿಡಿಯೊ ಹುಡುಕುತ್ತಾ, ನೋಡುತ್ತಾ ಇರುವ ಬದಲು ಕೆಳಗೆ ನೀಡಿರುವ URL ತಂತ್ರಗಳನ್ನು ಉಪಯೋಗಿಸಿ.


೧.ಉತ್ತಮ ಗುಣಮಟ್ಟದ ವಿಡಿಯೊಗಳನ್ನು ವೀಕ್ಷಿಸಲು
ಯೂಟ್ಯೂಬ್ ಕೆಲವು ವಿಡಿಯೊಗಳನ್ನು ಉತ್ತಮ ಗುಣಮಟ್ಟದಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಪರೀಕ್ಷಿಸಲು ಯೂಟ್ಯೂಬ್ URL ನ ಕೊನೆಯಲ್ಲಿ &fmt=18 ಅಥವಾ &fmt=22 ಸೇರಿಸಿ.
೨.ಉತ್ತಮ ಗುಣಮಟ್ಟದ ವಿಡಿಯೊಗಳನ್ನು ನಿಮ್ಮ ವೆಬ್ಸೈಟ್ ಗಳಲ್ಲಿ ಸೇರಿಸಿ
ನಿಮ್ಮ ವೆಬ್ಸೈಟ್ ಗಳಲ್ಲಿ ಯೂಟ್ಯೂಬ್ ವಿಡಿಯೊಗಳನ್ನು ಸೇರಿಸಲು ಯೂಟ್ಯೂಬ್ URL ನ ಕೊನೆಯಲ್ಲಿ &ap=%2526fmt%3D18 ಅಥವಾ &ap=%2526fmt%3D22 ಸೇರಿಸಿ.


೩.ನಿಮಗೆ ಬೇಕಾದಲ್ಲಿಂದ ವಿಡಿಯೊ ಲೋಡ್ ಮಾಡಲು
ಕೆಲವೊಮ್ಮೆ ನೀವು ವಿಡಿಯೊವೊಂದನ್ನು ಮೊದಲಿನಿಂದ ನೋಡುವ ಬದಲು ಒಂದಷ್ಟು ಸಮಯದ ನಂತರ ನೋಡಬೇಕಾಗಿರುತ್ತದೆ. ಇದಕ್ಕಾಗಿ ನೀವು ಯೂಟ್ಯೂಬ್ URL ನ ಕೊನೆಯಲ್ಲಿ #t=03m22s (#t=XXmYYs for XX mins and YY seconds) ಸೇರಿಸಿ.


೪.ಸರ್ಚ್ ಬಾಕ್ಸ್ ಅನ್ನು ಕಾಣದಂತೆ ಮಾಡಲು
ನೀವು ನಿಮ್ಮ ವೆಬ್ಸೈಟಿಗೆ ವಿಡಿಯೊವೊಂದನ್ನು ಸೇರಿಸಿದರೆ ಆ ವಿಡಿಯೊ ಮೇಲೆ ನೀವು ನಿಮ್ಮ ಮೌಸ್ ಸೂಚಕವನ್ನು ಆ ವಿಡಿಯೊ ಮೇಲೆ ತಂದಾಗಲೆಲ್ಲಾ ನಿಮಗೆ ಸರ್ಚ್ ಬಾಕ್ಸ್ ಕಾಣಿಸುತ್ತದೆ. ಇದನ್ನು ಹೋಗಲಾಡಿಸಲು URL ಗೆ &showsearch=0 ಸೇರಿಸಿ.
೫.ವಿಡಿಯೊವೊಂದರ ಸ್ವಲ್ಪ ಭಾಗ ಮಾತ್ರ ಸೇರಿಸಿ.
ನೀವು ನಿಮ್ಮ ವೆಬ್ಸೈಟಿಗೆ ವಿಡಿಯೊವೊಂದರ ಸ್ವಲ್ಪ ಭಾಗವನ್ನು ಮಾತ್ರ ಸೇರಿಸಬೇಕೆಂದಿದ್ದರೆ URL ನ ಕೊನೆಗೆ &start=30 ಸೇರಿಸಿ. ಇದು ಮೊದಲ 30 ಸೆಕೆಂಡ್ ವಿಡಿಯೊವನ್ನು ಬಿಟ್ಟುಬಿಡುತ್ತದೆ 
೬.ಪ್ರಾದೇಶಿಕ ಸೋಸುವಿಕೆಯನ್ನು ಉಪೇಕ್ಷಿಸಿ
ಕೆಲವೊಂದು ವಿಡಿಯೊಗಳು ಕೇವಲ ಕೆಲವೊಂದು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಇದನ್ನು ಉಪೇಕ್ಷಿಸಲು ಯೂಟ್ಯೂಬ್ URL ಅನ್ನು ಕೆಳಗಿನ ರೀತಿಯಲ್ಲಿ ಬದಲಾಯಿಸಿ.
http://www.youtube.com/watch?v=<somecode> ಅನ್ನು 
http://www.youtube.com/v/<somecode> ಹೀಗೆ ಬದಲಾಯಿಸಿ.


೭.ವಿಡಿಯೊ ಡೌನ್ಲೋಡ್ ಮಾಡಿ
ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಲು youtube.com ಗೆ ಮೊದಲು kick ಎಂದು ಸೇರಿಸಿ. ಅಂದರೆ kickyoutube.com ಎಂದು ಬದಲಾಯಿಸಿ.