ಬುಧವಾರ, ಜನವರಿ 18, 2012

ಯಾವುದೇ ತಂತ್ರಜ್ನಾನದ ನೆರವಿಲ್ಲದೆ ನಿಮ್ಮ ಹಾರ್ಡ್ ಡಿಸ್ಕ್ ಡ್ರೈವ್ ಅನ್ನು ಕಾಣದಂತೆ ಮಾಡಿ ಈ ತಂತ್ರದ ಮೂಲಕ ನೀವು ನಿಮ್ಮ ಹಾರ್ಡ್ ಡಿಸ್ಕ್ ಡ್ರೈವ್ ಅನ್ನು ಕಾಣದಂತೆ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಬೇರೆಯವರಿಂದ ರಕ್ಷಿಸಬಹುದು


ಹಂತ ಹಂತವಾಗಿ ಕಾಣದಂತೆ ಮಾಡುವುದು ಹೇಗೆಂಬುದನ್ನು ನೋಡೋಣ


೧)ಮೊದಲು start ಬಟನ್ ಅನ್ನು ಒತ್ತಿ ನಂತರ run ಅನ್ನು ಆಯ್ಕೆ ಮಾಡಿಕೊಳ್ಳಿ.
೨)ನಂತರ ಕೆಳಗಿನಂತೆ ವಿಂಡೊವೊಂದು ತೆರೆದುಕೊಳ್ಳುತ್ತದೆ. ಅಲ್ಲಿ gpedit.msc ಎಂದು ಟೈಪಿಸಿ ok ಬಟನ್ ಮೇಲೆ ಕ್ಲಿಕ್ ಮಾಡಿ

೩)ಈಗ ಕೆಳಗಿನಂತೆ "local group policy" ಪರದೆಯೊಂದು ತೆರೆದುಕೊಳ್ಳುತ್ತದೆ. ಅಲ್ಲಿ ಬಲಗಡೆ user configuration ಮೇಲೆ ಡಬಲ್ ಕ್ಲಿಕ್ ಮಾಡಿ.

೪)ನಂತರ "Administrative templates" ಅನ್ನು ಆಯ್ಕೆ ಮಾಡಿಕೊಳ್ಳಿ.

೫)ಈಗ "windows components" ಆಯ್ಕೆ ಮಾಡಿ, ನಂತರ "Windows Explorer" ಆಯ್ಕೆ ಮಾಡಿ.


೬)ನಂತರ ಎಡಗಡೆ ಭಾಗದಲ್ಲಿ "hiide these specified drives in my compter" ಮೇಲೆ ಡಬಲ್  ಕ್ಲಿಕ್ ಮಾಡಿ.

೭)ಈಗ ನಿಮಗೆ ಕೆಳಗಿನಂತೆ ಪರದೆಯೊಂದು ಕಾಣುತ್ತದೆ.
ಅಲ್ಲಿ "enabled" ಆಯ್ಕೆಯನ್ನು ಆಯ್ಕೆ ಮಾಡಿ ಮತ್ತು ನೀವು ಕಾಣದಂತೆ ಮಾಡಬೇಕಾದ ಡ್ರೈವ್ ಗಳನ್ನು ಆಯ್ಕೆ ಮಾಡಿ.


೮) ಎಲ್ಲಾ ಡೈವ್ ಗಳನ್ನು ಕಾಣದಂತೆ ಮಾಡಲು "restrict all drives" ಅನ್ನು ಆಯ್ಕೆ  ಮಾಡಿಕೊಳ್ಳಿ ನಂತರ ok ಮೇಲೆ ಕ್ಲಿಕ್ ಮಾಡಿ.

೯)ಮತ್ತೆ ಕಾಣುವಂತೆ ಮಾಡಲು ಮೇಲಿನ ಎಲ್ಲಾ ೭ ಹಂತಗಳನ್ನು ಪಾಲಿಸಿ ಕೊನೆಗೆ "enabled" ಬದಲು "disabled" ಆಯ್ಕೆ ಮಾಡಿ.


ಸೋಮವಾರ, ಜನವರಿ 9, 2012

ಉಚಿತ ತಂತ್ರಾಂಶದ ಟೈಮರ್ ನಿಲ್ಲಿಸಿ

ಉಚಿತ ತಂತ್ರಾಂಶದ ಟೈಮರ್ ನಿಲ್ಲಿಸಿ ಮತ್ತು ಅದನ್ನು ನಿಮಗೆ ಬೇಕಾದಷ್ಟು ದಿನಗಳ ಕಾಲ ಉಪಯೋಗಿಸಿ.
ಈ ಅಪ್ಲಿಕೇಷನ್ ಅನ್ನು ಉಪಯೋಗಿಸುವ ಮೂಲಕ ನಿಮ್ಮ ಟ್ರಯಲ್ ಸಾಫ್ಟ್ ವೇರ್ ಟೈಮರ್ ಅನ್ನು ಜೀವನ ಪರ್ಯಂತ ನಿಲ್ಲಿಸಬಹುದು.
ಕೇವಲ .EXE ಕಡತವನ್ನು ಉಪಯೋಗಿಸಿ ಮತ್ತು ನಿಮಗೆ  ಬೇಕಾದ ದಿನಾಂಕಕ್ಕೆ ನಿಲ್ಲಿಸಿ.

ಈ ಕೆಳಗಿನ ಲಿಂಕಿನಲ್ಲಿ ನನ್ನ ಗೆಳೆಯ ಆದಿತ್ಯ ತಯಾರಿಸಿರುವ ಡೌನ್ಲೋಡ್ ಮಾಡಿಕೊಳ್ಳಿ

 http://www.mediafire.com/?rzw4kej58dcp8r3


ಭಾನುವಾರ, ಜನವರಿ 8, 2012

ಯು.ಎಸ್.ಬಿ ಮೊಡಮ್ ಅಥವಾ 3ಜಿ ಡೊಂಗಲ್ ಅನ್ನು ಯಾವುದೇ ಸಿಮ್ ಮೂಲಕ ಉಪಯೋಗಿಸಿ|ಯಾವುದೇ ಅನ್ ಲಾಕಿಂಗ್ ಬೇಕಾಗಿಲ್ಲ


ಗೆಳೆಯರೆ, ಇದೊಂದು ತುಂಬಾ ಸುಲಭವಾದ ಟ್ರಿಕ್,

೧)ಮೊದಲ್ ಯಾವುದಾದರೂ ಸಿಮ್ ಅನ್ನು ನಿಮ್ಮ ಮೊಡಮ್ ಗೆ ಸೇರಿಸಿ]

೨)ನಿಮ್ಮ ಮೊಡಮ್ ಸಾಫ್ಟ್ ವೇರ್ ಉಪಯೋಗಿಸಬೇಡಿ, ಅದು It is Invalid Sim ಎಂದು ತೋರಿಸುತ್ತದೆ. ಅದರ ಬಗ್ಗೆ ಚಿಂತೆ ಬೇಡ
೩)NOKIA PC SUITE ಅನ್ನು ತೆರೆಯಿರಿ
೪)ಅಲ್ಲಿ Connect to Internet ಆಯ್ದುಕೊಳ್ಳಿ.
೫)Configure ಗೆ ಹೋಗಿ. ಅಲ್ಲಿ Data Card Modem ಅನ್ನು ಆಯ್ದುಕೊಳ್ಳಿ ಮತ್ತು ಬೇರೆ ಎಲ್ಲಾ Operator Application Settings ಅನ್ನು ನೀವು ನಿಮ್ಮ ನೊಕಿಯಾ ಮೊಬೈಲಿನಲ್ಲಿ ಬಳಸಿದಂತೆ ಬಳಸಿ. ಉದಾ:ನೀವು ಟಾಟಾ ಡೊಕೊಮೊ ಬಳಸುತ್ತಿದ್ದರೆ TATA.DOCOMO.INTERNET ಎಂದು ಟೈಪಿಸಿ.
೬)Finish ಮೇಲೆ ಕ್ಲಿಕ್ ಮಾಡಿ.

ಇಲ್ಲಿಗೆ ಮುಗಿಯಿತು.
ಈಗ PC Suite ಮುಖಾಂತರ ಇಂಟರ್ನೆಟ್ ಉಪಯೋಗಿಸಿ.

ಶುಕ್ರವಾರ, ಜನವರಿ 6, 2012

ನಿಮ್ಮ ಜಿ-ಮೈಲ್ ಅಥವಾ ಫೇಸ್ ಬುಕ್ ಅಕೌಂಟ್ ಅನ್ನು ಕಾಪಾಡಿಕೊಳ್ಳುವುದು ಹೇಗೆ?


ನಿಮ್ಮ ಜಿ-ಮೈಲ್ ಅಥವಾ ಫೇಸ್ ಬುಕ್ ಅಕೌಂಟ್ ಅನ್ನು ಕಾಪಾಡಿಕೊಳ್ಳುವುದು ಹೇಗೆ?

೧)ಎಲ್ಲಾದರೂ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಟೈಪ್ ಮಾಡಬೇಕಾದರೆ ಮೊದಲು ನಿಮ್ಮ ಅಡ್ರಸ್ ಬಾರಿನಲ್ಲಿರುವ ವೆಬ್ಸೈಟ್ ವಿಳಾಸವನ್ನು ಪರೀಕ್ಷಿಸಿ.

೨)ಆ ವಿಳಾಸ ನಂಬುವಂತದೆಂದು ನಿಮಗೆ ನಂಬಿಕೆ ಬರುವವರೆಗೂ ಆ ಲಿಂಕ್ ಅನ್ನು ಹಿಂಬಾಲಿಸಬೇಡಿ ಮತ್ತು ನಿಮ್ಮ ಯಾವುದೇ ಮುಖ್ಯವಾದ ಮಾಹ್ತಿಗಳನ್ನು  ನೀಡಬೇಡಿ.

೩)ನಿಮ್ಮ ಸ್ಪಾಮ್ ಫೋಲ್ಡರ್ ನಲ್ಲಿ ಬರುವ ಮತ್ತು ಲಾಟರಿ ಮಿಂಚೆ(ಮೈಲ್) ಗಳನ್ನು ನಂಬಬೇಡಿ

ಗುರುವಾರ, ಜನವರಿ 5, 2012

ಉಚಿತವಾಗಿ .in ಡೊಮೈನ್ ಪಡೆಯಿರಿ


ಆತ್ಮೀಯ ಗೆಳೆಯರೆ,
ಎಲ್ಲರಿಗೂ ತಮ್ಮದೇ ಆದ ಒಂದು ಸ್ವಂತ ಡೊಮೈನ್ (ಉದಾ:my.in, adeshct.in) ಹೊಂದಿರಬೇಕೆಂದು ಆಸೆ ಇರುತ್ತದೆ. ಆದರೆ ಅದಕ್ಕೆ ಕಟ್ಟಬೇಕಾದ ಹಣ ನಮ್ಮ ಕೈಯನ್ನು ಕಟ್ಟಿ ಹಾಕುತಿತ್ತು. ಈಗ ಗೂಗಲ್ Hostgrator ಸಹಾಯದೊಂದಿಗೆ ನಿಮಗೆ ನಿಮ್ಮದೇ ಆದ ಸ್ವಂತ ಡೊಮೈನ್ (.in) ಅನ್ನು ಉಚಿತವಾಗಿ ಒಂದು ವರ್ಷದವರೆಗೆ ಹೊಂದಬಹುದು.
ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ
http://www.indiagetonline.in/


೧)ಅಲ್ಲಿ Yes, I want my free Website! ಬಟನ್  ಮೇಲೆ ಕ್ಲಿಕ್ ಮಾಡಿ.


೨)ಮೊದಲು ನಿಮ್ಮ ಡೊಮೈನ್ ನೇಮ್ ಟೈಪೈಸಿ Check ಬಟನ್ ಮೇಲೆ ಕ್ಲಿಕ್ ಮಾಡಿ.
೩) ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ,


೪)ಈಗ ನೀವು ನಿಮ್ಮ ಮಾಹಿತಿಯನ್ನು ಅಲ್ಲಿ ನೀಡಿರುವ ಫಾರ್ಮ್ ನಲ್ಲಿ ತುಂಬಿಸಿ Next ಬಟನ್ ಮೇಲೆ ಕ್ಲಿಕ್ ಮಾಡಿ.
ಇಲ್ಲಿಗೆ ನಿಮ್ಮ ಡೊಮೈನ್ ನಿಮ್ಮದಾಗುತ್ತದೆ.

ಬುಧವಾರ, ಜನವರಿ 4, 2012

ಯಾವುದೇ ಕಡತವನ್ನು ಕೇವಲ ಒಂದೇ ಒಂದು ಸಾಫ್ಟ್ ವೇರ್ ಇಂದ ತೆಗೆಯಿರಿ


      ಯಾವುದೇ ಕಡತವನ್ನು ತೆರೆಯುವ ಮೊದಲು ನೀವು ಅದಕ್ಕೆ ಸಂಬಂಧಿಸಿದ ಸಾಫ್ಟ್ ವೇರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಕೆಲವೊಂದು ಬಾರಿ ನಮಗೆ ಆ ಸಾಫ್ಟ್ ವೇರ್ ಸಿಗುವುದೇ ಇಲ್ಲ. ಇದರಿಂದ ಕೆಲವೊಮ್ಮೆ ನಾವು ಬೇಕಾದ ಕಡತವನ್ನು ತೆರೆಯಲಾಗದೇ ಪರಿತಪಿಸುತ್ತೇವೆ. ಇದಕ್ಕಾಗಿ ನೀವು ಈ ಕೆಳಗಿನ ಸಾಫ್ಟ್ ವೇರ್ ಡೌನ್ಲೋಡ್ ಮಾಡಿಕೊಂಡು ಯಾವುದೇ ಫಾರ್ಮಾಟ್ ನಲ್ಲಿ ಇರುವ ಕಡತವನ್ನು ತೆರಯಬಹುದು.

http://www.filesee.com/download.html

ನೀವು ಈ ಸಾಫ್ಟ್ ವೇರ್ ಉಪಯೋಗಿಸಿ ಕೆಳಗಿರುವ ಫಾರ್ಮಾಟ್ ನಲ್ಲಿರುವ ಕಡತಗಳನ್ನು ತೆರೆಯಬಹುದು.

->ಮೈಕ್ರೊಸಾಫ್ಟ್ ಆಫಿಸ್ ಇಲ್ಲದೆ ನೀವು DOC/DOCX, XLS/XLSX, CSV, .ppt, .pptx, .pps, .xls, .xlsm, .xlsx ಫಾರ್ಮಾಟ್ ನಲ್ಲಿರುವ ಕಡತಗಳನ್ನು ತೆರೆಯಬಹುದು.
->MP3, WMV, MID, WAVplus, .avi, .flv, .mid, .mkv, .mp3, .mp4, .mpeg, .mpg, .mov, .wav, .wmv, .3gp, .flac, ಇತರೆ
->PNG, JPEG, BMP, GIF, TIFF, ICO, RAW, ಇತರೆ
->.htm, .html
->.resx, .xml
->.srt
->ಚಿತ್ರಗಳು=>.bmp, .gif, .jpg, .jpeg, .png, .tif, .tiff, .ಪ್ಸ್ದ್, .arw, .cf2, .cr2, .crw, .dng, .erf, .mef, .mrw, .nef,  
   .orf, .pef, .raf, .raw, .sr2, .x3f
->.ico

->.xps
->ಟೊರೆಂಟ್=>.torrent
->ಫ್ಲಾಶ್=>.swf
->.rtf
->.bat, .cfg, .ini, .log, .reg, .txt
->ಆಪಲ್ ಪೇಜಸ್=>.pages
->.csv, .msg, .pdf