ಭಾನುವಾರ, ಜನವರಿ 8, 2012

ಯು.ಎಸ್.ಬಿ ಮೊಡಮ್ ಅಥವಾ 3ಜಿ ಡೊಂಗಲ್ ಅನ್ನು ಯಾವುದೇ ಸಿಮ್ ಮೂಲಕ ಉಪಯೋಗಿಸಿ|ಯಾವುದೇ ಅನ್ ಲಾಕಿಂಗ್ ಬೇಕಾಗಿಲ್ಲ


ಗೆಳೆಯರೆ, ಇದೊಂದು ತುಂಬಾ ಸುಲಭವಾದ ಟ್ರಿಕ್,

೧)ಮೊದಲ್ ಯಾವುದಾದರೂ ಸಿಮ್ ಅನ್ನು ನಿಮ್ಮ ಮೊಡಮ್ ಗೆ ಸೇರಿಸಿ]

೨)ನಿಮ್ಮ ಮೊಡಮ್ ಸಾಫ್ಟ್ ವೇರ್ ಉಪಯೋಗಿಸಬೇಡಿ, ಅದು It is Invalid Sim ಎಂದು ತೋರಿಸುತ್ತದೆ. ಅದರ ಬಗ್ಗೆ ಚಿಂತೆ ಬೇಡ
೩)NOKIA PC SUITE ಅನ್ನು ತೆರೆಯಿರಿ
೪)ಅಲ್ಲಿ Connect to Internet ಆಯ್ದುಕೊಳ್ಳಿ.
೫)Configure ಗೆ ಹೋಗಿ. ಅಲ್ಲಿ Data Card Modem ಅನ್ನು ಆಯ್ದುಕೊಳ್ಳಿ ಮತ್ತು ಬೇರೆ ಎಲ್ಲಾ Operator Application Settings ಅನ್ನು ನೀವು ನಿಮ್ಮ ನೊಕಿಯಾ ಮೊಬೈಲಿನಲ್ಲಿ ಬಳಸಿದಂತೆ ಬಳಸಿ. ಉದಾ:ನೀವು ಟಾಟಾ ಡೊಕೊಮೊ ಬಳಸುತ್ತಿದ್ದರೆ TATA.DOCOMO.INTERNET ಎಂದು ಟೈಪಿಸಿ.
೬)Finish ಮೇಲೆ ಕ್ಲಿಕ್ ಮಾಡಿ.

ಇಲ್ಲಿಗೆ ಮುಗಿಯಿತು.
ಈಗ PC Suite ಮುಖಾಂತರ ಇಂಟರ್ನೆಟ್ ಉಪಯೋಗಿಸಿ.

6 ಕಾಮೆಂಟ್‌ಗಳು:

 1. ನೀವು ಹೇಳಿದಂತೆ ನನಗೆ connect ಮಾಡಲು ಆಗುತ್ತಿಲ್ಲ ದಯವಿಟ್ಟು ಸಹಾಯ ಮಾಡಿ

  ಪ್ರತ್ಯುತ್ತರಅಳಿಸಿ
 2. ಗಿರೀಶ್ ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆಯಿರಲಿ. ಪರೀಕ್ಷೆ ಎಂಬ ನೆಪ ಇಷ್ಟು ದಿನ ಇತ್ತ ಬರದಂತೆ ಮಾಡಿತ್ತು.

  ನಿಮಗೆ ಎಲ್ಲಿ ತೊಂದರೆ ಆಗುತ್ತಿದೆ ಎಂದು ತಿಳಿಸಿದರೆ ನನಗೆ ಉತ್ತರಿಸುವುದಕ್ಕೆ ಸುಲಭವಾಗುತ್ತದೆ. ದಯಮಾಡಿ ಮೊದಲ ಹಂತದಲ್ಲಿ ತೊಂದರೆಯಾಗುತ್ತಿದೆಯೊ ಅಥವಾ ಬೇರೆ ಯಾವ ಹಂತದಲ್ಲಿ ತೊಂದರೆ ಆಗುತ್ತಿದೆ ಎಂದು ತಿಳಿಸಿ.

  ಪ್ರತ್ಯುತ್ತರಅಳಿಸಿ
 3. ೫ ನೇ ಹಂತದಲ್ಲಿ Configure ನಲ್ಲಿ Data Card ಮೋಡೆಮ್ ಎಂದು ತೋರಿಸುವುದಿಲ್ಲ ಮತ್ತು Operator Application ಸೆಟ್ಟಿಂಗ್ಸ್ ನ ಬಗ್ಗೆ ತಿಳಿಸಿ
  ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 4. configure ನಲ್ಲಿ Data Card Modem ತೋರಿಸಲು ಮೊದಲು ನೀವು Data Card ಅನ್ನು ನಿಮ್ಮ ಗಣಕದಲ್ಲಿ ಅಳವಡಿಸಬೇಕು. ಮತ್ತು ಅದರ ತಂತ್ರಾಂಶಗಳನ್ನು ನಿಮ್ಮ ಗಣಕದಲ್ಲಿ ಇನ್ಸ್ಟಾಲ್ ಮಡಿರಬೇಕು.

  ಇನ್ನು Operator Application Settings. ಇದು ನಿಮ್ಮ ಮೊಬೈಲಿನಲ್ಲಿ ಇಂಟರ್ನೆಟ್ ಉಪಯೋಗಿಸ ಬೇಕೆಂದರೆ ಇರಬೇಕಾದ ಸೆಟ್ಟಿಂಗ್ಸ್. ಇದರಲ್ಲಿ ನಿಮಗೆ Access Point ಎಂಬುದೊಂದು ಬರುತ್ತದೆ.
  ಉದಾ:
  ಏರ್ ಟೆಲ್:airtelgprs.com
  ಟಾಟಾ ಡೊಕೊಮೊ:TATA.DOCOMO.INTERNET

  ಪ್ರತ್ಯುತ್ತರಅಳಿಸಿ
 5. ನಮಸ್ತೆ ಗೆಳೆಯ ನನಗೆ ಒಂದು ಮಾಹಿತಿಬೇಕಿತ್ತು ..
  ನಾನು ಈಗ ಮೊಬೈಲ್ ಮೂಲಕ ನೆಟ್ ಉಪಯೋಗಿಸುತ್ತೇನೆ ..
  ನಾನು
  ಯು.ಎಸ್.ಬಿ ಮೊಡಮ್ ಅಥವಾ 3ಜಿ ಡೊಂಗಲ್ ಅನ್ನು
  ಖರೀದಿಸಲು ಬಯಸುತ್ತೇನೆ ನನಗೆ ಒಂದು ಅನುಮಾನ ?
  ನಾನು ಈಗ ಮೊಬೈಲ್ ಗೆ ಹಾಕಿರೋ ಅದೇ sim
  ಡೊಂಗಲ್ ಗೆ ಹಾಕಿ ಉಪಯೋಗಿಸಬಹುದು ?
  ಅತವ
  ಡೊಂಗಲ್ ಗೆ ಅಂತಾನೆ ಏನಾದರೂ ವಿಷಶವಾದ ಸಿಮ್ ಇದೆಯಾ ?
  ಹಾಗೂ ಯಾವ ಕಂಪನಿ ಡೊಂಗಲ್ ಉತ್ತಮ ?
  ದಯವಿಟ್ಟು ಹೇಳಿ ಗೆಳೆಯ !
  ನಿಮ್ಮ ಉತ್ತರಕ್ಕಾಗಿ ಕಾಯುತ್ತೇನೆ!
  ವಂದನೆಗಳು!

  ಪ್ರತ್ಯುತ್ತರಅಳಿಸಿ
 6. ಪ್ರಕಾಶ್ ಅವರೇ ಡೊಂಗಲ್ ಗೆ ಅಂತಾನೆ ವಿಶೇಷವಾದ ಯಾವುದೇ ಸಿಮ್ ಇಲ್ಲ ನಿಮ್ಮ ಮೊಬೈಲ್ ಸಿಮ್ ಕೂಡ ಬಳಸಬಹುದು, ಇನ್ನು ಉತ್ತಮವಾದ ಡೊಂಗಲ್ ಅಂತಾದರೆ Micromax 353G ಚೆನ್ನಾಗಿದೆ. ಬೆಲೆ ಸುಮಾರು ೧೪೦೦ ರಿಂದ ೧೭೦೦ ಇದೆ.

  ಪ್ರತ್ಯುತ್ತರಅಳಿಸಿ