ಬುಧವಾರ, ಜನವರಿ 18, 2012

ಯಾವುದೇ ತಂತ್ರಜ್ನಾನದ ನೆರವಿಲ್ಲದೆ ನಿಮ್ಮ ಹಾರ್ಡ್ ಡಿಸ್ಕ್ ಡ್ರೈವ್ ಅನ್ನು ಕಾಣದಂತೆ ಮಾಡಿ ಈ ತಂತ್ರದ ಮೂಲಕ ನೀವು ನಿಮ್ಮ ಹಾರ್ಡ್ ಡಿಸ್ಕ್ ಡ್ರೈವ್ ಅನ್ನು ಕಾಣದಂತೆ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಬೇರೆಯವರಿಂದ ರಕ್ಷಿಸಬಹುದು


ಹಂತ ಹಂತವಾಗಿ ಕಾಣದಂತೆ ಮಾಡುವುದು ಹೇಗೆಂಬುದನ್ನು ನೋಡೋಣ


೧)ಮೊದಲು start ಬಟನ್ ಅನ್ನು ಒತ್ತಿ ನಂತರ run ಅನ್ನು ಆಯ್ಕೆ ಮಾಡಿಕೊಳ್ಳಿ.
೨)ನಂತರ ಕೆಳಗಿನಂತೆ ವಿಂಡೊವೊಂದು ತೆರೆದುಕೊಳ್ಳುತ್ತದೆ. ಅಲ್ಲಿ gpedit.msc ಎಂದು ಟೈಪಿಸಿ ok ಬಟನ್ ಮೇಲೆ ಕ್ಲಿಕ್ ಮಾಡಿ

೩)ಈಗ ಕೆಳಗಿನಂತೆ "local group policy" ಪರದೆಯೊಂದು ತೆರೆದುಕೊಳ್ಳುತ್ತದೆ. ಅಲ್ಲಿ ಬಲಗಡೆ user configuration ಮೇಲೆ ಡಬಲ್ ಕ್ಲಿಕ್ ಮಾಡಿ.

೪)ನಂತರ "Administrative templates" ಅನ್ನು ಆಯ್ಕೆ ಮಾಡಿಕೊಳ್ಳಿ.

೫)ಈಗ "windows components" ಆಯ್ಕೆ ಮಾಡಿ, ನಂತರ "Windows Explorer" ಆಯ್ಕೆ ಮಾಡಿ.


೬)ನಂತರ ಎಡಗಡೆ ಭಾಗದಲ್ಲಿ "hiide these specified drives in my compter" ಮೇಲೆ ಡಬಲ್  ಕ್ಲಿಕ್ ಮಾಡಿ.

೭)ಈಗ ನಿಮಗೆ ಕೆಳಗಿನಂತೆ ಪರದೆಯೊಂದು ಕಾಣುತ್ತದೆ.
ಅಲ್ಲಿ "enabled" ಆಯ್ಕೆಯನ್ನು ಆಯ್ಕೆ ಮಾಡಿ ಮತ್ತು ನೀವು ಕಾಣದಂತೆ ಮಾಡಬೇಕಾದ ಡ್ರೈವ್ ಗಳನ್ನು ಆಯ್ಕೆ ಮಾಡಿ.


೮) ಎಲ್ಲಾ ಡೈವ್ ಗಳನ್ನು ಕಾಣದಂತೆ ಮಾಡಲು "restrict all drives" ಅನ್ನು ಆಯ್ಕೆ  ಮಾಡಿಕೊಳ್ಳಿ ನಂತರ ok ಮೇಲೆ ಕ್ಲಿಕ್ ಮಾಡಿ.

೯)ಮತ್ತೆ ಕಾಣುವಂತೆ ಮಾಡಲು ಮೇಲಿನ ಎಲ್ಲಾ ೭ ಹಂತಗಳನ್ನು ಪಾಲಿಸಿ ಕೊನೆಗೆ "enabled" ಬದಲು "disabled" ಆಯ್ಕೆ ಮಾಡಿ.


2 ಕಾಮೆಂಟ್‌ಗಳು:

  1. windows 7 ನಲ್ಲಿ start ನ ನಂತರ run ಒಪ್ಶನ್ ಕಾಣುತ್ತಿಲ್ಲ ...ಅಂದರೆ new version ನಲ್ಲಿ ನಿಮ್ಮ ಮಾಹಿತಿಗೆ ಅವಕಾಶವಿಲ್ಲ ಎಂದು ಕಾಣುತ್ತದೆ.
    KM

    ಪ್ರತ್ಯುತ್ತರಅಳಿಸಿ
  2. In Windows 7 there is no option called "Run"
    Please use the box that appears at the bottom when u clicked the Window(Start) button..

    ಪ್ರತ್ಯುತ್ತರಅಳಿಸಿ