ಶನಿವಾರ, ಫೆಬ್ರವರಿ 25, 2012

ಗೂಗಲ್ ಸರ್ಚ್ ಫಲಿತಾಂಶಗಳು ನಿಮ್ಮ ಮೊಬೈಲಿನಲ್ಲಿ


ಈಗ ನೀವು ಗೂಗಲ್ ಸರ್ಚ್ ಫಲಿತಾಂಶಗಳನ್ನು ನಿಮ್ಮ ಮೊಬೈಲಿನಲ್ಲೇ ಯಾವುದೇ ಅಂತರ್ಜಾಲ ಸಂಪರ್ಕವಿಲ್ಲದೇ ಪಡೆಯಬಹುದು.

ನೀವು ಮಾಡಬೆಕಾಗಿರುವುದು ಇಷ್ಟೆ. ಕೇವಲ ನೀವು ಹುಡುಕಬೇಕೆಂದಿರುವ ಪದವನ್ನು ಅಥವಾ ವಿಷಯವನ್ನು +919773300000 ಗೆ ಸಂದೇಶ ಕಳುಹಿಸಿ. ನಿಮಗೆ ನೀವು ಹುಡುಕುತ್ತಿರುವ ಪದಗಳ ಫಲಿತಾಂಶ ಗೂಗಲ್ ನಿಂದ ಸಂದೇಶದ ಮೂಲಕ ಬರುತ್ತದೆ. ಇದು ಗೂಗಲ್ ನ ಹೊಸದಾದ ಉಚಿತವಾದ ಸೇವೆ.

ಚಿತ್ರ ಕೃಪೆ: http://evolvor.com

ಭಾನುವಾರ, ಫೆಬ್ರವರಿ 19, 2012

ಸ್ಕ್ಯಾನ್ ಮಾಡಿರುವ್ ಕಡತ ಅಥ್ವಾ ಯಾವುದೇ ಚಿತ್ರದಲ್ಲಿರುವ ಅಕ್ಷರಗಳನ್ನು ನಕಲಿಸಿ

ಇದನ್ನು ಉಪಯೋಗಿಸಲು ನೀವು ನಿಮ್ಮ ಗಣಕದಲ್ಲಿ ಮೈಕ್ರೊಸಾಫ್ಟ್ Office 2007 ಅನ್ನು ಇನ್ಸ್ಟಾಲ್ ಮಾಡಿರಬೇಕು


  • ಮೊದಲಿಗೆ Microsoft One Note ಅನ್ನು ತೆರೆಯಿರಿ
  • ನಂತರ ನೀವು ನಕಲೀಕರಿಸಬೇಕೆಂದಿರುವ ಅಕ್ಷರಗಳಿರುವ ಚಿತ್ರವನ್ನು One Note ಗೆ ಅಂಟಿಸಿ (ಕಾಪಿ ಪೇಸ್ಟ್ ಮಾಡಿ)
  • ಈಗ ಚಿತ್ರದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಅಲ್ಲಿರುವ "Copy text from image" ಮೇಲೆ ಕ್ಲಿಕ್ ಮಾಡಿ
  • ಈಗ ನಿಮಗೆ ಬೇಕಾದ ಅಕ್ಷರಗಳು ಸಿದ್ಧವಾಗಿವೆ. ಅದನ್ನು ನಿಮ್ಗೆ ಬೇಕಾದಲ್ಲಿಗೆ Ctrl+v ಒತ್ತುವ ಮೂಲಕ ಅಂಟಿಸಬಹುದು.

ಭಾನುವಾರ, ಫೆಬ್ರವರಿ 5, 2012

ನಿಮ್ಮ ಗಣಕವನ್ನು ಆನ್ಲೈನ್ ಪರೀಕ್ಷಕಗಳ ಮೂಲಕ ಪರೀಕ್ಷಿಸಿ


ನಿಮ್ಮ ಗಣಕಯಂತ್ರದಲ್ಲಿ ವೈರಸ್ ಸೇರಿಕೊಂಡಿದೆಯೆಂದೊ ಅಥವಾ ಯಾವುದಾದರೂ ಕಡತ ವೈರಸ್ ಸೋಂಕಿತ ಎಂಬ ಅನುಮಾನ ನಿಮ್ಮಲಿದ್ದು, ಮತ್ತು ನಿಮ್ಮಲ್ಲಿರುವ ಯಾವುದೇ ವೈರಸ್ ನಿರೋಧಕ ತಂತ್ರಾಂಶ ಕೆಲಸ ಮಾಡುತ್ತಿಲ್ಲವೆಂದರೆ, ಕೆಳಗೆ ನೀಡಿರುವ ವೆಬ್ಸೈಟ್ ಗಳಿಗೆ ಹೋಗಿ ಒಮ್ಮೆ ಪರೀಕ್ಷಿಸಿ.

ಈ ಆನ್ಲೈನ್ ವೈರಸ್ ಸ್ಕ್ಯಾನರ್ ಗಳಲ್ಲಿ ನೀವು ಯಾವುದೇ ಶುಲ್ಕವಿಲ್ಲದೇ ಕಡತಗಳನ್ನು ಪರೀಕ್ಞಿಸಬಹುದು.

ಕೇವಲ ನಿಮ್ಮ ಕಡತವನ್ನು ಆ ವೈರಸ್ ಸ್ಕ್ಯಾನರ್ ಗಳಲ್ಲಿ ಸೇರಿಸಿ ಮತ್ತು ನಿಮ್ಮ ಕಡತದಲ್ಲಿ ವೈರಸ್ ಸೇರಿಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

http://housecall.trendmicro.com/
http://www.bitdefender.com/scan8/ie.html/
http://www.kaspersky.com/scanforvirus/
http://support.f-secure.com/enu/home/ols.shtml/
http://virusscan.jotti.org/
http://onlinescan.avast.com/
http://www.freedom.net/viruscenter/onlineviruscheck.html/
http://www.pandasecurity.com/homeusers/solutions/activescan/
http://www.symantec.com/cgi-bin/securitycheck.cgi/
http://www.virustotal.com/
http://www.windowsecurity.com/trojanscan/
http://ca.com/ro/securityadvisor/pestscan/
http://ca.com/ro/securityadvisor/virusinfo/scan.aspx/
http://us.mcafee.com/root/mfs/default.asp/
http://onecare.live.com/site/en-us/default.htm/
http://www.eset.com/onlinescan/
http://www.nanoscan.com/
http://viruschief.com/
http://digg.com/programming/Multi_Virus_Scan_Website/
http://www.tenebril.com/scanner/main_start.php/

ಚಿತ್ರ ಕೃಪೆ:technosmart.com

ಶುಕ್ರವಾರ, ಫೆಬ್ರವರಿ 3, 2012

ನಿಮ್ಮ XP SERVICE PACK 2 ಅನ್ನು SERVICE PACK 3 ಗೆ ಬದಲಾಯಿಸಿ.ನಿಮ್ಮ XP SERVICE PACK 2 ಅನ್ನು SERVICE PACK 3 ಗೆ ಬದಲಾಯಿಸಿ.


ಕೆಲವೊಮ್ಮೆ ನೀವು ನಿಮ್ಮ ಗಣಕಕ್ಕೆ ಕೆಲವೊಂದು ತಂತ್ರಾಂಶಗಳನ್ನು ಇನ್ಸ್ಟಾಲ್ ಮಾಡಬೇಕಾಗಿರುತ್ತದೆ. ಈ ತಂತ್ರಾಂಶಗಳು ಕೆವಲ SP3 ಅಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಆದರೆ ನಿಮ್ಮ ಗಣಕದಲ್ಲಿ XP SP 2 ಇನ್ಸ್ಟಾಲ್ ಮಾಡಿರುತ್ತೀರಿ.
ಈಗ ಹೊಸದಾಗಿ SP3 ಇನ್ಸ್ಟಾಲ್ ಮಾಡುವ ಬದಲು, SP2 ಅನ್ನೇ SP3 ಅನ್ನಾಗಿ ಬದಲಾಯಿಸಬಹುದು.
೧)ಮೊದಲು Registery Editor(Start–>Run ಅಲ್ಲಿ regedit ಎಂದು ಟೈಪಿಸಿ Enter ಒತ್ತಿ) ತೆರೆಯಿರಿ.
೨)ಈಗ Registery Editor ನ ಎಡ ಭಾಗದಲ್ಲಿರುವ ತೆರೆಯ ಮೂಲಕ ಕೆಳಗಿನಂತೆ ಹೋಗಿ.
HKEY_LOCAL_MACHINE >>> SYSTEM >>> CurrentControlSet >>>Control >>> Windows
ಗೆ ಹೋಗಿ
ಈಗ ನಿಮ್ಮ ಬಲ ಭಾಗದಲ್ಲಿರುವ “CSDVersion” ಮೇಲೆ ಎರಡು ಬಾರಿ ಕ್ಲಿಕ್ಕಿಸಿ, ತದನಂತರ ತೆರೆದುಕೊಳ್ಳುವ ತೆರೆಯಲ್ಲಿ Value data: ಅನ್ನು 200 ರ ಬದಲು 300 ಎಂದು ಬದಲಾಯಿಸಿ OK ಒತ್ತಿ ನಂತರ ನಿಮ್ಮ ಗಣಕವನ್ನು ರಿಸ್ಟಾರ್ಟ್ ಮಾಡಿ.
ಈ ಒಂದು ತಂತ್ರ SP3 ಅಲ್ಲಿ ಮಾತ್ರ ಕೆಲಸ ಮಾಡುವ ತಂತ್ರಾಂಶಗಳನ್ನು SP2 ವಿನಲ್ಲೂ ಕೆಲಸ ಮಾಡುವಂತೆ ಮಾಡುತ್ತದೆ.
ಪ್ರತಿಕ್ರಿಯಿಸಲು ಮರೆಯಬೇಡಿ.