ಮಂಗಳವಾರ, ಮಾರ್ಚ್ 20, 2012

ನಿಮ್ಮ ಬ್ಲಾಗ್ ಪೂರ್ತಿ ಕನ್ನಡದಲ್ಲಿ

ಆತ್ಮೀಯ ಕನ್ನಡಿಗರೆ,
ಈಗ ನೀವು ನಿಮ್ಮ ಬ್ಲಾಗ್ ಅನ್ನು ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆ ಪೂರ್ತಿ ಕನ್ನಡದಲ್ಲೇ ನೋಡಬಹುದು. ಈಗ ನಿಮಗೆ ಗೂಗಲ್ ಈ ರೀತಿಯ ಅವಕಾಶವನ್ನು ಕಲ್ಪಿಸಿದೆ.

ಇದಕ್ಕಾಗಿ ನೀವು ದುಡ್ಡೇನು ಕೊಡಬೇಕಿಲ್ಲ. ಕೇವಲ ನಿಮ್ಮ ಬ್ಲಾಗರ್ ಅಕೌಂಟಿಗೆ ಹೋಗಿ ಅಲ್ಲಿ ಕೆಳಗಿನ ರೀತಿಯಲ್ಲಿ ಮುಂದುವರೆಯಿರಿ.

Settings->Language and Formatting

ಅಲ್ಲಿ Language ಕಾಲಂನಲ್ಲಿ ಕನ್ನಡ ಭಾಷೆಯನ್ನು ಆರಿಸಿಕೊಳ್ಳಿ.

ನಂತರ Save ಮಾಡಿ

ಗ್ಯಾಡ್ಜೆಟ್ ಗಳು ಬ್ಲಾಗಿಗೆ ಹೊರಗಿನವುಗಳಾಗಿರುವುದರಿಂದ ಅಲ್ಲಿ ನಿಮಗೆ ಕನ್ನಡ ಸಿಗುವುದಿಲ್ಲ.ಈಗ ನಿಮ್ಮ ಬ್ಲಾಗ್ ಕನ್ನಡದಲ್ಲಿ ತಯಾರಾಗಿರುತ್ತದೆ.

ಕನ್ನಡ ಭಾಷೆಯನ್ನು ಸೇರಿಸಿರುವುದಕ್ಕೆ ನನ್ನ ಕಡೆಯಿಂದ ಗೂಗಲ್ ಗೆ ಒಂದು ಅಭಿನಂದನೆ

ಈ ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ :)

ಚಿತ್ರ ಕೃಪೆ: hackuadi.blogspot.in

7 ಕಾಮೆಂಟ್‌ಗಳು:

  1. ಧನ್ಯವಾದಗಳು, ನಿಮ್ಮ ಕನ್ನಡದ ಸೇವೆಗಾಗಿ, ಹೀಗೆಯೇ ಮುಂದುವರಿಯಲಿ

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಆದೇಶ್ ಕುಮಾರ್ ಅವರೇ, ನಿಮ್ಮ ಅರ್ಥಪೂರ್ಣ ಮಾಹಿತಿಗಾಗಿ.

    ಪ್ರತ್ಯುತ್ತರಅಳಿಸಿ
  3. ಧನ್ಯವಾದ ಆದೇಶ್..ಕನ್ನಡ ಇನ್ನೂ ಬೆಳೆಯಬೇಕು...ಹೀಗೇ ಬೆಳೆಯಬೇಕು

    ಪ್ರತ್ಯುತ್ತರಅಳಿಸಿ