ಶುಕ್ರವಾರ, ಏಪ್ರಿಲ್ 27, 2012

ವೇಗವಾಗಿ ಟೊರೆಂಟ್ ಕಡತವನ್ನು ಡೌನ್ಲೋಡ್ ಮಾಡಿಕೊಳ್ಳಲು

            ನಿಮಗೆ ಟೊರೆಂಟ್ ಕಡತಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ತೊಂದರೆಯಾಗುತ್ತಿರಬೇಕು ಅಥವಾ ತುಂಬಾ ನಿಧಾನವಿರಬಹುದು. ಈಗ ಈ ನಿಧಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಇಲ್ಲೊಂದು ಚಿಕ್ಕ ಉಪಾಯವಿದೆ.

ಈ ಕೆಳಗಿನವುಗಳನ್ನು ಅಲ್ಲಿರುವಂತೆಯೇ ಪಾಲಿಸಿ
೧.ಮೊದಲು ನಿಮಗೆ ಬೇಕಾದ ಟೊರೆಂಟ್ ಅನ್ನು ನಿಮ್ಮ ಗಣಕಕ್ಕೆ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಅದರ ವೆಬ್ ಅಡ್ರೆಸ್ ಅನ್ನು ಕಾಪಿ ಮಾಡಿಕೊಳ್ಳಿ.
೨.ನಂತರ www.bitlet.org ವೆಬ್ಸೈಟಿಗೆ ಭೇಟಿ ನೀಡಿ.
೩. ಅಲ್ಲಿ ನಿಮ್ಮ ಗಣಕದಲ್ಲಿರುವ ಟೊರೆಂಟ್ ಅನ್ನು ಡೌನ್ಲೋಡ್ ಮಾಡಲು "Select Local Torrent" ಬಟನ್ ಒತ್ತಿ ಅಥವಾ ನಿಮ್ಮ ಬಳಿ ಆ ಟೊರೆಂಟಿನ ವೆಬ್ ಅಡ್ರೆಸ್ ಇದ್ದಲ್ಲಿ ಕೆಳಗೆ ನೀಡಿರುವ ಚಿತ್ರದಲ್ಲಿರುವಂತೆ ಅಲ್ಲಿರುವ ಬಾಕ್ಸಿನಲ್ಲಿ ಅಂಟಿಸಿ ಮತ್ತು "Download Torrent" ಬಟನ್ ಮೇಲೆ ಒತ್ತಿ.


೪. ಈಗ ನಿಮ್ಮ ಟೊರೆಂಟ್ ಆ bitlet ವೆಬ್ ಸರ್ವರ್ ಅಲ್ಲಿ ಡೌನ್ಲೋಡ್ ಆಗುತ್ತದೆ. ಡೌನ್ಲೋಡ್ ಆದ ನಂತರ ನಿಮಗೆ ಆ ವೆಬ್ಸೈಟ್ ಡೌನ್ಲೋಡ್ ಆದ ಕಡತವನ್ನು ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲು Direct Link ಒಂದನ್ನು ನೀಡುತ್ತದೆ.
೫.ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆ ಕಡತವನ್ನು ನೇರವಾಗಿ ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಬಹುದು.
೬.ಈ ವೆಬ್ಸೈಟಿನಲ್ಲಿ ನಿಮ್ಮ ಟೊರೆಂಟ್ ನೀವು ಅಂದುಕೊಳ್ಳುವುದಕ್ಕಿಂತಲೂ ವೇಗವಾಗಿ ಡೌನ್ಲೋಡ್ ಆಗುತ್ತದೆ.
೭. ನಿಮ್ಮ ಅಮೂಲ್ಯ ಸಮಯವನ್ನು ಇದರಿಂದ ಉಳಿಸಿಕೊಳ್ಳಬಹುದು.
೮.ನಿಮ್ಮ ಗಣಕಕ್ಕೆ ಆ ಕಡತವನ್ನು ಇಳಿಸಿಕೊಳ್ಳುವ ಮೊದಲು Internet Download Manager ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ. ಇದರಿಂದ ಡೌನ್ಲೋಡ್ ವೇಗವನ್ನು ಹೆಚ್ಚಿಸಬಹುದು. ಅದಕ್ಕಾಗಿ ಕೆಳಗಿನ ಲಿಂಕಿಗೆ ಭೇಟಿ ನೀಡಿ.
Click here for Internet Download Manager

ಚಿತ್ರ ಕೃಪೆ:http://hackuadi.blogspot.com

ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ ಅನಾನಿಮಸ್ ಹ್ಯಾಕರ್ ಗಳು ಭಾರತದಲ್ಲಿ ವಿಫಲರಾಗಿದ್ದೇಕೆ?

                           ಹೌದು ನನಗೆ ಇನ್ನೂ ನೆನೆಪಿದೆ. ಅದು ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತಿದ್ದ ಕಾಲ. ಆಗ ತಾನೆ ಕೆಲವೊಂದು ದೇಶಗಳಲ್ಲಿ ಹ್ಯಾಕರ್ ಗಳು ಅನಾನಿಮಸ್ (ಅಜ್ಞಾತ) ಎಂಬ ಗುಂಪೊಂದನ್ನು ಕಟ್ಟಿಕೊಂಡು ಹಲವು ದೇಶಗಳ ಸರ್ಕಾರಿ ವೆಬ್ಸೈಟ್ ಗಳಿಗೆ ಲಗ್ಗೆ ಹಾಕಿ ಭ್ರಷ್ಟಾಚಾರವನ್ನು ಕೊನೆಗಾಣಿಸಿ ಎಂಬ ಪೋಸ್ಟ್ ಗಳನ್ನು ಹಾಕುತ್ತಿದ್ದರು.           ಇತ್ತ ನಮ್ಮ ದೇಶದಲ್ಲೂ ಕೂಡ ಭ್ರಷ್ಟಾಚಾರದ ಹೋರಾಟ ತಾರಕಕ್ಕೇರುತ್ತಿದುದ್ದನ್ನು ಕಂಡು ಅದಕ್ಕೆ ಜೊತೆ ನೀಡಲು ಆ ಗುಂಪು ಭಾರತದಲ್ಲೂ ಉದಯಿಸಿತು. ಮೊದಲಿಗೆ ಅದು ತನ್ನ ಕಾರ್ಯಚರಣೆಯನ್ನು ನಮ್ಮ ದೇಶದ ಒಂದು ಸರ್ಕಾರಿ ವೆಬ್ಸೈಟ್ ಅನ್ನು ಹ್ಯಾಕ್ ಮಾಡುವುದರೊಂದಿಗೆ ಪ್ರಾರಂಬಿಸಿತು. ಅದು ಸಾಮಾನ್ಯ ಸರ್ಕಾರಿ ವೆಬ್ಸೈಟ್ ಗಳನ್ನು ಮಾತ್ರ ಹ್ಯಾಕ್ ಮಾಡಿದ್ದರೆ ಅದು ಇನ್ನೂ ಇಲ್ಲೇ ಇರುತಿತ್ತೇನೊ. ಆದರೆ ಅದು ಭಾರತದ ಯಾವೊಬ್ಬ ಪ್ರಜೆಯು ಇಷ್ಟಪಡದ ಕೆಲಸಕ್ಕೆ ಕೈಹಾಕಿತು. ಅಂದರೆ ನಮ್ಮೆಲ್ಲರ ಹೆಮ್ಮೆಯ ಭಾರತ ಸೇನೆಯ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿತು.(ಅದು ಹ್ಯಾಕ್ ಮಾಡಿತೊ ಅಥವಾ ವೆಬ್ಸೈಟ್ ಅನ್ನು ಡೌನ್ ಮಾಡಿತೊ ಇದುವರೆಗೂ ತಿಳಿದಿಲ್ಲ).

ಇದನ್ನು ಯಾವೊಬ್ಬ ಭಾರತೀಯನು ಸಹಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅನಾನಿಮಸ್ ಗುಂಪು ನಡೆಸುತಿದ್ದ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಅದರ ವಿರುದ್ಡ ಟೀಕೆಗಳ ಸುರಿಮಳೆಯಾಯಿತು. ಕೆಲವೊಂದು ಕಾಮೆಂಟುಗಳು ಮತ್ತು ಟ್ವೇಟುಗಳು ಹೀಗಿದ್ದವು:

(ಇವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರಿಸಿದ್ದೇವೆ)
“”ಇದೊಂದು ಖಂಡನೀಯವಾದ ಕಾರ್ಯ. ಸೇನೆಯ ವೆಬ್ಸೈಟ್ ಅನ್ನು ಹ್ಯಾಕ್ ಮಾಡುವುದಕ್ಕೆ ಭಾರತವೇನು ಪಾಕಿಸ್ತಾನವಲ್ಲ.”"
“”ತುಂಬಾ ಬೇಜಾರಾಗುತ್ತಿದೆ. ಸೇನೆಗೂ, ಸರ್ಕಾರದ ಭ್ರಷ್ಟಾಚಾರಕ್ಕೂ ಯಾವ ಸಂಬಂಧವಿದೆ??”"
“”ಬರುವಾಗ ನಿಮಗೆ ಭವ್ಯ ಸ್ವಾಗತ ನೀಡಿದ್ದೇವೆ. ಈಗ ನಿಮಗೆ ಹೊರ ಹೋಗಲು ಯಾವ ರೀತಿಯ ಸ್ವಾಗತ ನೀಡಬೇಕು?”"

ಹೀಗೆ ಅನೇಕರು ತಮ್ಮ ದುಗುಡವನ್ನು ಕೋಪವನ್ನು ಪ್ರದರ್ಶಿಸಿದರು. ಕೊನೆಗೆ ಅನಾನಿಮಸ್ ಗುಂಪು ಸ್ಪಷ್ಟನೆ ನೀಡಬೇಕಾಯಿತು.

ಅದು ತನ್ನ ಸ್ಪಷ್ಟನೆಯಲ್ಲಿ “ನಾವೂ ಕೂಡ ಭಾರತೀಯರೆ. ನಮಗೂ ಭಾರತೀಯ ಸೇನೆಯ ಮೇಲೆ ಅಷ್ಟೇ ಗೌರವವಿದೆ. ಇನ್ನು ಮುಂದೆ ಯಾವುದೇ ವೆಬ್ಸೈಟ್ ಅನ್ನು ಹ್ಯಾಕ್ ಮಾಡಬೇಕೆಂದರೂ ಇಲ್ಲಿ ಕೇಳಿಯೇ ಮಾಡುತ್ತೇವೆ” ಎಂದು ಹೇಳಿಕೊಂಡಿತ್ತು.
ಜನರನ್ನು ಸಮಾಧಾನ ಮಾಡಲು ಆಗದಿದ್ದಾಗ ಮತ್ತೊಮ್ಮೆ “ನಾವು ಸೇನೆಯ ವೆಬ್ಸೈಟಿಂದ ಯಾವುದೇ ಮಾಹಿತಿಗಳನ್ನು ಕದ್ದಿಲ್ಲ. ಕೇವಲ ಒಂದು ಗಂಟೆಯ ಕಾಲ ಡೌನ್ ಮಾಡಲಾಗಿತ್ತು ಅಷ್ಟೆ” ಎಂದು ಹೇಳಿಕೊಂಡಿತು.

ಹೀಗೆ ಮೇಲಿಂದ ಮೇಲೆ ಸ್ಪಷ್ಟನೆ ನೀಡುತ್ತಾ ಹೋಯಿತು. ಆದರೆ ಅದು ಏನು ಮಾಡಿದರೂ ಮೊದಲಿದ್ದ ವಿಶ್ವಾಸವನ್ನು ಪಡೆದುಕೊಳ್ಳಲಾಗಲಿಲ್ಲ. ಮಾರನೆ ದಿನವೆ ಅದರ ಫೇಸ್ ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ಗಳು ಮಾಯವಾಗಿದ್ದವು.
ಮತ್ತೊಮ್ಮೆ ಹೊಸದಾಗಿ ನಾವು ನಿಜವಾದ ಅನಾನಿಮಸ್ ಎಂದು ಹೇಳಿಕೊಂಡು ಫೇಸ್ ಬುಕ್ ಅಕೌಂಟ್ ತೆರೆದ ಗುಂಪೊಂದು ಮಿಲಿಟರಿ ವೆಬ್ಸೈಟ್ ಹ್ಯಾಕಿಗೂ ತನಗೂ ಸಂಬಂಧವಿಲ್ಲವೆಂದು ಹೇಳಿಕೊಂಡಿತು.

ಆದರೆ ಅಂದು ನಾನು ಆಶ್ಚರ್ಯದಿಂದ ಗಮನಿಸಿದ ಸಂಗತಿಯೆಂದರೆ ಭಾರತೀಯರು ಭಾರತ ಸೇನೆಯನ್ನು ಅದೆಷ್ಟು ನಂಬಿದ್ದಾರೆ ಎಂಬುದು ಮತ್ತು ಅದಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾದರೂ ಅದೆಷ್ಟು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದು. ಆ ಪ್ರತಿಕ್ರಿಯೆ ಜಾತಿ, ಮತ, ಪಕ್ಷಗಳನ್ನು ಮೀರಿದುದಾಗಿತ್ತು. ಕೇವಲ ಭಾರತೀಯತೆ ಮಾತ್ರ ಅಲ್ಲಿ ರಾರಾಜಿಸುತಿತ್ತು.

ಚಿತ್ರ ಕೃಪೆ: ಗೂಗಲ್ ಇಮೇಜಸ್