ಶುಕ್ರವಾರ, ಜುಲೈ 13, 2012

ಕನ್ನಡದಲ್ಲಿ ಟೈಪಿಸಲು ನಿಮಗೆ ಗೊತ್ತಿಲ್ಲವೆ? ಅಥವಾ ಕನ್ನಡದಲ್ಲಿ ಟೈಪಿಸಲು ನಿಮಗೆ ಕಷ್ಟವಾಗುತ್ತಿದೆಯೆ?

ಕನ್ನಡದಲ್ಲಿ ಟೈಪಿಸಲು ನಿಮಗೆ ಗೊತ್ತಿಲ್ಲವೆ? ಅಥವಾ ಕನ್ನಡದಲ್ಲಿ ಟೈಪಿಸಲು ನಿಮಗೆ ಕಷ್ಟವಾಗುತ್ತಿದೆಯೆ?  
ಗೆಳೆಯರ ಸಹಾಯದಿಂದ ಮತ್ತು ಒಂದಷ್ಟು ಫೇಸ್ಬುಕ್ ಗೆಳೆಯರು ಮತ್ತು ಗುಂಪುಗಳಿಂದ ಒಂದಷ್ಟು ವೆಬ್ಸೈಟ್ ಗಳನ್ನು ಕಲೆ ಹಾಕಿದ್ದೇವೆ. ನಿಮಗೆ ಉಪಯೋಗವಾಗಬಹುದು


೧)ವೆಬ್ ದುನಿಯಾದವರ ಪುಟ
ಇಲ್ಲಿ ನೀವು ನೇರವಾಗಿ ಕನ್ನಡವನ್ನು ಟೈಪಿಸಬಹುದು.

೨)ಖ್ವಿಲ್ ಪ್ಯಾಡ್
ಇಲ್ಲಿ ಆಂಗ್ಲ ಅಕ್ಷರಗಳನ್ನು ಟೈಪಿಸಿ ನಂತರ ಸ್ಪೇಸ್ ಬಾರ್ ಒತ್ತಿ. ಕನ್ನಡ ಅಕ್ಷರಗಳು ಮೂಡುವುದು

೩)ಗೂಗಲ್ ಟ್ರಾನ್ಸ್ ಲಿಟರೇಟ್
ಇದು ಗೂಗಲ್ ನವರ ಸೇವೆ. ಇಲ್ಲಿ ಆಂಗ್ಲ ಅಕ್ಷರಗಳನ್ನು ಟೈಪಿಸಿ ನಂತರ ಸ್ಪೇಸ್ ಬಾರ್ ಒತ್ತಿ. ಕನ್ನಡ ಅಕ್ಷರಗಳು ಮೂಡುವುದು. Ctrl+G ಒತ್ತುವ ಮೂಲಕ ಆಂಗ್ಲ ಮತ್ತು ಕನ್ನಡಕ್ಕೆ ಬದಲಾಗಬಹುದು.

೪)ಮೋನುಸಾಫ್ಟ್
ಇಲ್ಲೂ ಕೂಡ ನೇರವಾಗಿ ಕನ್ನಡದಲ್ಲಿ ಟೈಪಿಸಬಹುದು. ನಿಮ್ಮ ಉಪಯೋಗಕ್ಕಾಗಿ ಇದರಲ್ಲಿಯೇ ನಿಮಗೆ ಯಾವ ಅಕ್ಷರಕ್ಕಾಗಿ ಏನನ್ನು ಟಪಿಸಬೇಕೆಂಬ ಮಾಹಿತಿಯೂ ಇದೆ.

೫)ಬರ್ ನ್ಹಾ
ಇಲ್ಲಿ ನೀವು ನೇರವಾಗಿ ಕನ್ನಡ ಟೈಪಿಸಬಹುದಾದರೂ ಇದು ಬೇರೆ ತರಹದ ಕೀಬೋರ್ಡ್ ಅನ್ನು ಹೊಂದಿದೆ.

೬)ಬರಹ
ಈ ವೆಬ್ಸೈಟಿನಿಂದ ಬರಹ ತಂತ್ರಾಂಶ (ಸಾಫ್ಟ್ ವೇರ್) ವನ್ನು ನಿಮ್ಮ ಗಣಕಕ್ಕೆ ಇಳಿಸಿ ಇನ್ಸ್ಟಾಲ್ ಮಾಡಿ ನಂತರ ಉಪಯೋಗಿಸಬಹುದು

೭)ನುಡಿ
ಈ ವೆಬ್ಸೈಟಿನಿಂದ ನುಡಿ ತಂತ್ರಾಂಶ (ಸಾಫ್ಟ್ ವೇರ್) ವನ್ನು ನಿಮ್ಮ ಗಣಕಕ್ಕೆ ಇಳಿಸಿ ಇನ್ಸ್ಟಾಲ್ ಮಾಡಿ ನಂತರ ಉಪಯೋಗಿಸಬಹುದು

3 ಕಾಮೆಂಟ್‌ಗಳು:

 1. ಮತ್ತೊಂದಿಷ್ಟು ಮಾಹಿತಿ. ನನ್ನ ಬ್ಲಾಗ್ ಬರಹದಲ್ಲಿ - "ಈಗ ಫೈಲ್ ಗಳಿಗೆ ಕನ್ನಡದಲ್ಲೇ ಹೆಸರು ಕೊಡಬಹುದು" - http://machikoppa.blogspot.in/2010/04/blog-post_17.html

  ಪ್ರತ್ಯುತ್ತರಅಳಿಸಿ
 2. ಕನ್ನಡದಲ್ಲಿ ಟೈಪಿಸಲು ಕಷ್ಟವೂ ಇಲ್ಲ, ನಷ್ಟವೂ ಇಲ್ಲ... ಅಭಿಮಾನ ಕೊರತೆ... ಸೋಮಾರಿತನ.

  ಪ್ರತ್ಯುತ್ತರಅಳಿಸಿ
 3. @SUBRAMANYA
  ಮಾಹಿತಿಗೆ ಧನ್ಯವಾದಗಳು ಸರ್ :)ಹೀಗೆ ಭೇಟಿ ನೀಡುತ್ತಿರಿ


  @ಶ್ರೀಪತಿ
  ಸತ್ಯ ಸರ್ :)
  ಹೀಗೆ ಭೇಟಿ ನೀಡುತ್ತಿರಿ

  ಪ್ರತ್ಯುತ್ತರಅಳಿಸಿ