ಭಾನುವಾರ, ಮಾರ್ಚ್ 24, 2013

ಟ್ವಿಟ್ಟರ್ ಗೆ ಅನುವಾದಕರು ಬೇಕಾಗಿದ್ದಾರೆ.

ಗೆಳೆಯರೆ, ಟ್ವಿಟ್ಟರ್ ಗೆ  ಅನುವಾದಕರು ಬೇಕಾಗಿದ್ದಾರೆ.
ಹೌದು.. ಟ್ವಿಟ್ಟರ್ ಅನ್ನು ನೀವು ಈಗ ಕನ್ನಡದಲ್ಲೂ ಬಳಸಬಹುದು. ಆದರೆ ಈಗ ನಿಮ್ಮ ಸಹಕಾರವೂ ಬೇಕಾಗಿದೆ.
ನೀವು ಅನುವಾದಕರಾಗಿ ಕೆಲಸ ಮಾಡಬೇಕಾಗಿದೆ, ಕನ್ನಡಕ್ಕಾಗಿ.


ಟ್ವಿಟ್ಟರ್ ಈಗ ಭಾರತ್ರೀಯ ಭಾಷೆಗಳಲ್ಲಿ ಕೇವಲ ಕನ್ನಡ, ತಮಿಳು, ಬೆಂಗಾಲಿ, ಉರ್ದು ಮತ್ತು ಹಿಂದಿಯಲ್ಲಿ ಮಾತ್ರ ಅನುವಾದಕ್ಕೆ ಲಭ್ಯವಿದೆ, ಮತ್ತು  ಈಗ ಉರ್ದು ಮತ್ತು ಹಿಂದಿಯಲ್ಲಿ ನೀವು ಉಪಯೋಗಿಸಲೂಬಹುದು.

ಅದೆಷ್ಟೋ ಮಂದಿ ಕನ್ನಡಿಗರು ಅನುವಾದಿಸುತ್ತಿದ್ದರೂ ಅದು ಸಾಕಾಗುತ್ತಿಲ್ಲ. ಅದೆಷ್ಟೊ ಮಂದಿ ಅನ್ಯರು ಬಂದು ಇನ್ನೇನೋ ಸೇರಿಸುತ್ತಿದ್ದಾರೆ. ದಯಮಾಡಿ ಬನ್ನಿ ಕನ್ನಡದಲ್ಲಿ ಫೇಸ್ ಬುಕ್ ತಂದಂತೆ, ಟ್ವಿಟ್ಟರ್ ಅನ್ನೂ ಕನ್ನಡದಲ್ಲಿ ತರೋಣ.

ಟ್ವಿಟ್ಟರ್ ನಲ್ಲಿನ ಕನ್ನಡದ ಫೋರಂ ಖಾಲಿ ಮನೆಯಂತಾಗಿದೆ. ಕೆಳಗಿನ ಚಿತ್ರ ಟ್ವಿಟ್ಟರ್ ನಲ್ಲಿನ ಕನ್ನಡದ ಫೋರಂ.
ಅನುವಾದಿಸಲು ಈ ಲಿಂಕಿಗೆ ಹೋಗಿ  http://translate.twitter.com ಮತ್ತು ನಿಮ್ಮ ಟ್ವಿಟ್ಟರ್ ಅಕೌಂಟಿನ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಉಪಯೋಗಿಸಿ ಲಾಗಿನ್ ಆಗಿ.

ಚಿತ್ರ ಕೃಪೆ:http://hackuadi.blogspot.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ